ಬೆಂಗಳೂರು: ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಚುನಾವಣೆಯಲ್ಲಿ (Election) ಅಕ್ರಮ ನಡೆದಿದೆ ಎಂಬ ಹೇಳಿಕೆಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಪ್ರತಿಕ್ರಿಯೆ ನೀಡಿದ್ದು ಇದು 2011ರಿಂದಲೂ ನಡೆಯುತ್ತಿರುವ ಅಕ್ರಮ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜರ್ಮನಿ, ಜಪಾನ್ ದೇಶದಲ್ಲಿ ಇವಿಎಂ ಮಿಷನ್‌ಗಳನ್ನು ತಯಾರು ಮಾಡುತ್ತಾರೆ. ಆದರೆ ಅಲ್ಲೇ ಇದನ್ನ ಬಳಕೆ ಮಾಡಲ್ಲ. ಹಾಗೆಯೇ ಅಮೆರಿಕ ಲಂಡನ್ನಲ್ಲೂ ಇವಿಎಂ (EVM) ಬಳಕೆ ಮಾಡಲ್ಲ. ನಮ್ಮ ದೇಶದಲ್ಲಿ ಇವಿಎಂ ಬಳಕೆಯನ್ನ ನಮ್ಮ ಪಕ್ಷವೇ ಜಾರಿಗೆ ತಂದಿದ್ದು, ಆದರೆ ಅದನ್ನ ಬಿಜೆಪಿಯವರು ಅಕ್ರಮಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: Mysuru | ಸಿಡಿಮದ್ದು ಸ್ಫೋಟ – ಮಹಿಳೆಗೆ ಗಾಯ
2011ರಿಂದಲೂ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡೇ ಬರುತ್ತಿದ್ದಾರೆ. ಬರೀ ಇವಿಎಂ ಮಾತ್ರವಲ್ಲ ಚುನಾವಣೆ ಅಂದರೆ ಬಿಜೆಪಿಯವರಿಗೆ ಅಕ್ರಮ. ಪ್ರತಿ ಹಂತದಲ್ಲೂ ಅಕ್ರಮ ಮಾಡಿಕೊಂಡು ಬರುತ್ತಿದ್ದಾರೆ ಎಂದರು. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ