ಯಾದಗಿರಿ: ನಾಳೆ ಸುರಪುರ ತಾಲೂಕಿನ ಕೆಂಭಾವಿ ಮತ್ತು ಕಕ್ಕೆರಾ ಪುರಸಭೆ ಮತ್ತು ಜಿಲ್ಲೆಯಲ್ಲಿ ಖಾಲಿಯಾದ 5-ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ನಡೆಯುತ್ತಿದ್ದು, ಶಾಂತಿಯುತ ಮತದಾನಕ್ಕೆ ಯಾದಗಿರಿ ಪೊಲೀಸ್ ಇಲಾಖೆ ಸಕಲ ರೀತಿಯಲ್ಲಿ ಸಜ್ಜಾಗಿದೆ.
Advertisement
ಮತದಾನದ ಪ್ರಯುಕ್ತ ಕೆಂಭಾವಿ ಪುರಸಭೆ 24, ಕಕ್ಕೆರಾ ಪುರಸಭೆ 23 ಮತ್ತು ಗ್ರಾಮ ಪಂಚಾಯತ್ 5 ಹೀಗೆ ಒಟ್ಟು 52 ಮತಗಟ್ಟೆಗಳನ್ನು ತೆರಯಲಾಗಿದೆ. ಈ ನಿಟ್ಟಿನಲ್ಲಿ ಶಾಂತಿಯುತ ಮತದಾನಕ್ಕಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ
Advertisement
Advertisement
ಮತದಾನ ನಡೆಯುವ ಸ್ಥಳಗಳಲ್ಲಿ 1 ಡಿಎಸ್‍ಪಿ, 4 ಸಿಪಿಐ 13 ಪಿಎಸ್‍ಐ 16 ಎಎಸ್‍ಐ 42 ಹೆಚ್‍ಸಿ 68 ಪಿಸಿ ಮತ್ತು 2 ಡಿಎಆರ್ ಹಾಗೂ 2-ಕೆಎಸ್‍ಆರ್‍ಪಿ ದಳಗಳನ್ನು ನಿಯೋಜಿಸಲಾಗಿದೆ.
Advertisement
ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಮತ್ತು ಮತಗಟ್ಟೆಯ ಸುತ್ತಲೂ 200 ಮೀ 144 ಸಿ.ಆರ್.ಪಿ.ಸಿ ಜಾರಿ ಇರುತ್ತದೆ. ಇದರಲ್ಲಿ ಬಹಿರಂಗ ಪ್ರಚಾರ ಮತ್ತು ಧ್ವನಿವರ್ಧಕ ಬಳಕೆ ಕೂಡಾ ನಿಷೇಧಿಸಲಾಗಿದೆ. ಒಟ್ಟಾರೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತ ಮತದಾನಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ