ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಡಿ ಹೊಗಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿಕೊಂಡಿರುವ ದಿನೇಶ್ ಗುಂಡೂರಾವ್ ಅವರು, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಮಧ್ಯಪ್ರದೇಶ, ಛತ್ತಿಸ್‍ಗಢ ಹಾಗೂ ರಾಜಸ್ಥಾನದಲ್ಲಿ ಅಗಾಧ ಜಯ ಗಳಿಸಿದ್ದೇವೆ. ಅವರ ಸ್ಫೂರ್ತಿದಾಯಕ ನಾಯಕತ್ವದಿಂದ ಹಿಂದಿ ಭಾಷಿಕರ ನಾಡಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
Advertisement
#AssemblyElections2018Results Congrats to Sri @RahulGandhi for leading @INCIndia to a stupendous win in #MadhyaPradesh #Rajasthan and #Chattisgarh. His inspiring leadership has swept the congress to power in the Hindi heartland.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 11, 2018
Advertisement
ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಅರುಣ್ ಅವರಿಗೆ ಪಂಚ ರಾಜ್ಯ ಚುನಾವಣೆಯು ತಕ್ಕ ಉತ್ತರ ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ವಿದೇಶಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಟ್ವೀಟ್ ಮಾಡಿದ್ದು, ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ. ಇದು ಗೆದ್ದು ಬೀಗುವ ಸಮಯ ಅಲ್ಲ. ಸೈದ್ಧಾಂತಿಕವಾಗಿ ಗಟ್ಟಿಗೊಂಡು ನೆಲದಲ್ಲಿ ಕಾಲೂರಿ ಹೋರಾಟದಲ್ಲಿ ತೊಡಗಬೇಕಾದ ಕಾಲ ಎಂದು ಹೇಳಿದ್ದಾರೆ.
Advertisement
With these #AssemblyElectionResults2018, I hope the @BJP4India and it’s arrogant pompous leaders like @narendramodi @amitshah @arunjaitley will henceforth stop talking about a Congress Mukt Bharath.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) December 11, 2018
ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.
ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ.
ಇದು ಗೆದ್ದು ಬೀಗುವ ಸಮಯ ಅಲ್ಲ.
ಸೈದ್ಧಾಂತಿಕವಾಗಿ ಗಟ್ಟಿಗೊಂಡು ನೆಲದಲ್ಲಿ ಕಾಲೂರಿ ಹೋರಾಟದಲ್ಲಿ ತೊಡಗಬೇಕಾದ ಕಾಲ.#AssemblyElections2018 @INCKarnataka
— Siddaramaiah (@siddaramaiah) December 11, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv