ರಾಯಚೂರು: ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ರಾಯಚೂರಿನಲ್ಲಿ ಕೆಪಿಸಿಸಿ ರಾಜ್ಯ ಮುಖಂಡರ ಸಭೆ ಆಯೋಜಿಸಲಾಗಿದೆ. ಈ ವೇಳೆ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಬುಲೆನ್ಸ್‌ಗೂ ದಾರಿ ಬಿಡದೇ ಘೋಷಣೆಯನ್ನು ಕೂಗಿದ್ದಾರೆ.
Advertisement
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‍ನ ಹಲವಾರು ನಾಯಕರು ಭಾಗಿಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳ 220 ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಶಾಸಕರು, ಮಾಜಿ ಸಂಸದರು, ಜಿಲ್ಲಾ ಘಟಕಗಳ ಪ್ರಮುಖರು ಸಮಾವೇಶದಲ್ಲಿ ಹಾಜರಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್‍ನವರಿಗೆ ಬಾರ್ ಗೊತ್ತಿಲ್ವಾ? ಯಾರೂ ಹೋಗೋದೇ ಇಲ್ವಾ- ಬಿಸಿ ಪಾಟೀಲ್ ಪ್ರಶ್ನೆ
Advertisement
Advertisement
ಕಾಂಗ್ರೆಸ್ ವಿಭಾಗೀಯ ಮಟ್ಟದ ಸಮಾವೇಶ ಹಿನ್ನೆಲೆ ನಗರದ ಗಾಂಧಿ ವೃತ್ತದ ಬಳಿ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಆಯಿತು. ಅಂಬುಲೆನ್ಸ್‌ಗೂ ದಾರಿ ಬಿಡದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದರಲ್ಲಿ ಮುಳುಗಿದ್ದರು. ಇದರಿಂದ ಸಾರ್ವಜನಿಕರು ಪರದಾಡಬೇಕಾಯಿತು.
Advertisement
ಸಭೆ ನಡೆಯುತ್ತಿರುವ ನಗರದ ಖಾಸಗಿ ಹೋಟೆಲ್ ಮುಂದೆ ಜನ ಜಮಾಯಿಸಿದ್ದರಿಂದ, ರಸ್ತೆ ಬಂದ್ ಆಗಿ ಮುಂದೆ ಹೋಗಲು ಆಗದೇ ಅಂಬುಲೆನ್ಸ್‌ನಲ್ಲಿದ್ದ ರೋಗಿ ಪರದಾಡುವಂತಾಯಿತು. ಕೋವಿಡ್ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಸೇರಿದ ಕಾರ್ಯಕರ್ತರು ನೂಕುನುಗ್ಗಲು ಮಾಡಿದರು. ಇದನ್ನೂ ಓದಿ:ಮೂವರ ವಿರುದ್ಧ ಹೈಕಮಾಂಡ್‍ಗೆ ಸಿಎಂ ದೂರು?