Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬ್ಯಾಲೆಟ್ ಪೇಪರ್‌ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ – ಚುನಾವಣಾ ಆಯುಕ್ತ ಸಂಗ್ರೇಶ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬ್ಯಾಲೆಟ್ ಪೇಪರ್‌ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ – ಚುನಾವಣಾ ಆಯುಕ್ತ ಸಂಗ್ರೇಶ್‌

Bengaluru City

ಬ್ಯಾಲೆಟ್ ಪೇಪರ್‌ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ – ಚುನಾವಣಾ ಆಯುಕ್ತ ಸಂಗ್ರೇಶ್‌

Public TV
Last updated: January 19, 2026 3:02 pm
Public TV
Share
4 Min Read
GBA Elections
SHARE

– ಮೇ ಅಥವಾ ಜೂನ್‌ ನಲ್ಲಿ ಗ್ರಾಮ, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ

ಬೆಂಗಳೂರು: ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳು ಬ್ಯಾಲೆಟ್‌ ಪೇಪರ್‌ನಲ್ಲೇ ನಡೆಯಲಿದೆ ಎಂದು ಚುನಾವಣಾ ಆಯೋಗದ ಆಯುಕ್ತ (Election Commissioner) ಸಂಗ್ರೇಶ್ ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ (Assembly elections) ಮಾತ್ರ ಇವಿಎಂ ಮಾಡಿದ್ದೇವೆ. ಬ್ಯಾಲೆಟ್‌ ಪೇಪರ್‌ನಲ್ಲಿ ಮಾಡಬಾರದು ಅಂತೇನಿಲ್ಲ. ಮುಂಬರುವ ಜಿಬಿಎ ಎಲೆಕ್ಷನ್‌, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಕೂಡ ಬ್ಯಾಲೆಟ್‌ ಪೇಪರ್‌ನಲ್ಲೇ ನಡೆಯಲಿದೆ ಎಂದರು. ಇದನ್ನೂ ಓದಿ: ಪೋಕ್ಸೋ ಕೇಸ್‌ನ ಸಂತ್ರಸ್ತೆಯ ಹೆಸರು, ವಿಳಾಸ ಬಹಿರಂಗ – ಮಾಜಿ ಸಚಿವ ಶ್ರೀರಾಮುಲು ವಿರುದ್ಧ FIR

ballot paper counting india

ಮೇ ಅಥವಾ ಜೂನ್‌ ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಮಾಡಬೇಕು ಅಂತ ಇದ್ದೇವೆ. ಡಿ ಲಿಮಿಟೇಷನ್ ರಿಪೋರ್ಟ್ ಸರ್ಕಾರ ನಮಗೆ ಸಲ್ಲಿಸಬೇಕಿದೆ. ಜನವರಿ 30ಕ್ಕೆ ಕೋರ್ಟ್ ಅಲ್ಲಿ ಒಂದು ಪಿಟಿಷನ್ ಇದೆ. ಅದು ಆದ ಬಳಿಕ ಮಾಡಬೇಕು ಅಂತಾ ಇದ್ದೇವೆ. ಗ್ರಾಮ ಪಂಚಾಯ್ತಿ ಚುನಾವಣೆ ಕೂಡ ಮಾಡಬೇಕು ಅಂತಿದ್ದು, ಅದೂ ಬ್ಯಾಲೆಟ್‌ ಪೇಪರ್‌ನಲ್ಲೇ ಇರುತ್ತೆ. ಸಾಕಷ್ಟು ಜನ ಬ್ಯಾಲೆಟ್‌ನಲ್ಲಿ ಮಾಡಿ, ಇವಿಎಂನಲ್ಲಿ (EVM) ಮಾಡಿ ಅಂತ ಪತ್ರ ಬರೆದಿದ್ರು. ಆದ್ರೆ ಬ್ಯಾಲೆಟ್‌ ಸೂಕ್ತ ಅನ್ನಿಸಿದೆ ಎಂದು ವಿವರಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ 88,91,411 ವೋಟರ್ಸ್‌
ಇನ್ನೂ ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್ ಮಾತನಾಡಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ. ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು 05 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡ್‌ಗಳು ರಚನೆಯಾಗಿವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆದಷ್ಟು ಬೇಗ ಈ ಕೆಟ್ಟ ಮನಸ್ಸಿನ, ಸ್ವಾರ್ಥ ಮಹಿಳೆಗೆ ಡಿವೋರ್ಸ್‌ ಕೊಡ್ತೀನಿ – ಪತ್ನಿ ವಿರುದ್ಧವೇ ಸಿಡಿದ ಪ್ರತೀಕ್ ಯಾದವ್!

evm counting

ಜಿಬಿಎ ನಗರ ಪಾಲಿಕೆಗಳ ಚುನಾವಣೆಗೆ 2025ರ ಅಕ್ಟೋಬರ್ 1 ನ್ನು ಆಧಾರವಾಗಿ ತೆಗೆದುಕೊಂಡು ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 45,69,193 ಪುರುಷರು, 43,20,583 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿದಂತೆ, ಒಟ್ಟು 88,91,411 ಮತದಾರರು ಇದ್ದಾರೆ. ಜನವರಿ 20 ರಿಂದ ಫೆಬ್ರವರಿ 3 ರ ವರೆಗೆ ಬೂತ್ ಲೆವಲ್ ಅಧಿಕಾರಿಗಳು (ಬಿ.ಎಲ್.ಓ) ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಈ ಅವಧಿಯಲ್ಲಿ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿಯು ಫೆಬ್ರವರಿ 4 ರಿಂದ ಫೆಬ್ರವರಿ 1 ರ ವರೆಗೆ ನಡೆಯಲಿದ್ದು, ಮಾರ್ಚ್ 16 ರಂದು ಮತದಾರರ ಪಟ್ಟಿಯ ಅಂತಿಮ ಪ್ರಕಟಣೆ ಮಾಡಲಾಗುವುದು ಎಂದು ವಿವರಿಸಿದರು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 23 ರಲ್ಲಿ ಅತಿ ಹೆಚ್ಚು 49,530 ಮತದಾರರು ಇದ್ದರೆ, ಬೆಂಗಳೂರು ಪೂರ್ವ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 16 ರಲ್ಲಿ ಅತಿ ಕಡಿಮೆ 10,926 ಮತದಾರರು ಇದ್ದಾರೆ. ಒಟ್ಟು 369 ವಾರ್ಡ್‌ಗಳಲ್ಲಿ 8,044 ಮತಗಟ್ಟೆಗಳು ಇರಲಿವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಚಳ್ಳಕೆರೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಸಂಗ್ರಹ ಆರೋಪ – ಗೋದಾಮಿನ ಮೇಲೆ ದಾಳಿ

ವೆಬ್‌ ಸೈಟ್‌ನಲ್ಲಿ ಮತದಾರರ ಪಟ್ಟಿ:
ವಾರ್ಡ್‌ವಾರು ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣ https://gba.karnataka.gov.in/home ನಲ್ಲಿ ಪಿಡಿಎಫ್ ಆವೃತ್ತಿಯಾಗಿ ಪ್ರಕಟಿಸಲಾಗುವುದು. ಸಾರ್ವಜನಿಕರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನ ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ.

GBA

ಪಾಲಿಕೆವಾರು ಸಹಾಯವಾಣಿ:
ಮತದಾರರ ಪಟ್ಟಿಗಳ ಪರಿಷ್ಕರಣೆಯ ವೇಳಾಪಟ್ಟಿಯ ಕುರಿತು ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಲಾಗುತ್ತಿದೆ. ಮತದಾರರ ಅನುಕೂಲಕ್ಕಾಗಿ ಐದು ನಗರ ಪಾಲಿಕೆಗಳ ಸಹಾಯವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ.

1. ಬೆಂಗಳೂರು ಕೇಂದ್ರ : 080-22975803
2. ಬೆಂಗಳೂರು ಉತ್ತರ : 080-22975936
3. ಬೆಂಗಳೂರು ದಕ್ಷಿಣ : 9480685704
4. ಬೆಂಗಳೂರು ಪೂರ್ವ : 9480685706
5. ಬೆಂಗಳೂರು ಪಶ್ಚಿಮ : 9480685703

ನಮೂನೆಗಳ ಮೂಲಕ ಅರ್ಜಿ ಸಲ್ಲಿಕೆ:
ಗ್ರೇಟರ್ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025 ರಂತೆ ವಾರ್ಡ್‌ವಾರು ಮತದಾರರ ಪಟ್ಟಿ ಸಿದ್ಧತೆಗೆ, ಆಯೋಗದಿಂದ ನೇಮಕಗೊಂಡ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿ / ಬಿ.ಎಲ್.ಓ ಅವರ ಬಳಿ ನಿಗಧಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.

1. ನಮೂನೆ–4 : ಮತದಾರರ ಹೆಸರು ಸೇರ್ಪಡೆಗೆ
2. ನಮೂನೆ–5 : ಹೆಸರು ಸೇರ್ಪಡೆಗೆ ಆಕ್ಷೇಪಣೆ
3. ನಮೂನೆ–6 : ಹೆಸರು ತಿದ್ದುಪಡಿಗೆ
4. ನಮೂನೆ–7 : ಸ್ಥಳ ಬದಲಾವಣೆಗೆ
5. ನಮೂನೆ–8 : ಹೆಸರು ತೆಗೆದುಹಾಕಲು

ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್ ಸಂಗ್ರೇಶಿ ರವರು ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆ ಮಾಡುವ ಸಲುವಾಗಿ ಇಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹೆಸರಿಲ್ಲದಿದ್ದರೆ ಕೂಡಲೆ ನಮೂನೆಯ ಮೂಲಕ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವ ಅವಕಾಶವಿದೆ. 18 ವರ್ಷಗಳಾದ ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ತಿಳಿಸಿದರು.

ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸಭೆ:
ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಾರ್ಡ್‌ನ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವಲ್ ಏಜೆಂಟ್‌ಗಳನ್ನು (BLA) ನೇಮಿಸಿ, ಎಲ್ಲಾ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರಲಾಯಿತು.

ಈ ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರುಗಳಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ಡಾ: ರಾಜೇಂದ್ರ ಕೆ.ವಿ, ಚುನಾವಣಾ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಯಾದ ಸೆಲ್ವಮಣಿ, ಅಪರ ಆಯುಕ್ತರು, ಚುನಾವಣೆ ಸಹಾಯಕ ಆಯುಕ್ತರು, ತಹಸೀಲ್ದಾರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

TAGGED:ballot paperBallot Papersbengaluruelection commissionerGBAlocal body electionsಗ್ರೇಟರ್‌ ಬೆಂಗಳೂರು ಪ್ರಾಧಿಕಾರಚುನಾವಣಾ ಆಯುಕ್ತರುಬೆಂಗಳೂರುಬ್ಯಾಲೆಟ್ ಪೇಪರ್ಸ್ಥಳೀಯ ಸಂಸ್ಥೆಗಳ ಚುನಾವಣೆ
Share This Article
Facebook Whatsapp Whatsapp Telegram

Cinema news

ashwini gowda gilli nata
ಗಿಲ್ಲಿ ನಿಜವಾದ ಬಡವ ಅಲ್ಲ, ಬಡವನ ಥರ ಗೆಟಪ್‌ ಹಾಕ್ಕೊಂಡು ಗೆದ್ದಿದ್ದಾರೆ: ಅಶ್ವಿನಿ ಗೌಡ
Cinema Latest Main Post TV Shows
ashwini gowda 1
ನಾನು ವಿನ್ನರ್‌ ಆಗುವ ನಿರೀಕ್ಷೆ ಹೆಚ್ಚಿತ್ತು: 2ನೇ ರನ್ನರ್‌ ಅಪ್‌ ಅಶ್ವಿನಿ ಗೌಡ ರಿಯಾಕ್ಷನ್‌
Cinema Latest Main Post TV Shows
Gilli Nata 5
BBK 12 | ಕಾವ್ಯನ್ನ ಮದ್ವೆ ಆಗ್ತೀರಾ ಅಂದಿದ್ದಕ್ಕೆ ಗಿಲ್ಲಿ ಕೊಟ್ಟ ಉತ್ತರ ಏನು?
Cinema Latest Main Post TV Shows
gilli nata bigg boss
ಬಿಗ್ ಬಾಸ್ ಸೀಸನ್ 12 ಗೆದ್ದ ಗಿಲ್ಲಿ – ಇಂದು ಮಳವಳ್ಳಿಯಿಂದ ಹುಟ್ಟೂರು ದಡದಪುರಕ್ಕೆ ಅದ್ದೂರಿ ಮೆರವಣಿಗೆ
Cinema Latest Mandya Top Stories TV Shows

You Might Also Like

Karachi Mall Fire 2
Latest

ಕರಾಚಿಯ ಶಾಪಿಂಗ್ ಮಾಲ್‌ ಧಗಧಗ – 14 ಮಂದಿ ಸಾವು, 60 ಕ್ಕೂ ಹೆಚ್ಚು ಜನ ನಾಪತ್ತೆ!

Public TV
By Public TV
27 seconds ago
Zameer Ahmed House Allocation Meeting
Dharwad

ಮನೆ ಹಂಚಿಕೆ ವಿಚಾರ – ಅಧಿಕಾರಿಗಳ ಜೊತೆ ಸಚಿವ ಜಮೀರ್ ಸಭೆ

Public TV
By Public TV
12 minutes ago
DGP Ramachandra Rao Parameshwara
Bengaluru City

ತಿರುಚಿದ ವಿಡಿಯೋ ಎಂದ ಡಿಜಿಪಿ – ಭೇಟಿಗೆ ಅನುಮತಿ ನೀಡದ ಪರಮೇಶ್ವರ್‌

Public TV
By Public TV
22 minutes ago
ramachandra rao
Bengaluru City

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್‌ ರಾಸಲೀಲೆ – ವಿಡಿಯೋ ವೈರಲ್‌

Public TV
By Public TV
24 minutes ago
udupi paryaya dc
Latest

ಉಡುಪಿ ಪರ್ಯಾಯ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಚಾಲನೆಗೆ ಆಕ್ಷೇಪ – ಡಿಸಿ ಸ್ಪಷ್ಟನೆ

Public TV
By Public TV
37 minutes ago
siddaramaiah
Bengaluru City

ರಾಮಚಂದ್ರ ರಾವ್ ರಾಸಲೀಲೆ ಕೇಸ್‌ – ಗೃಹ ಇಲಾಖೆಗೆ ವರದಿ ನೀಡಲು ಸಿಎಂ ಸೂಚನೆ

Public TV
By Public TV
52 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?