ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ರಾತ್ರಿ ಹೈಡ್ರಾಮಾವೊಂದು ನಡೆದಿದೆ. ಎಸ್‍ಬಿಐ ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಶ್ರೀರಂಗಪಟ್ಟಣದ ಎಸ್‍ಬಿಐ ಬ್ಯಾಂಕ್‍ನಿಂದ ಕೆಎ 11, 8489 ನಂಬರಿನ ಐಷರ್ ವಾಹನದಲ್ಲಿ 20 ಕೋಟಿ ಹಣ ತೆಗೆದುಕೊಂಡು ಬ್ಯಾಂಕ್ ಸಿಬ್ಬಂದಿ ಹೊರಟಿದ್ದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು. ಕೂಡಲೇ ವಾಹನ ಹಿಂಬಾಲಿಸಿದ ಜನರು ಮಳವಳ್ಳಿಯ ಎಸ್‍ಬಿಐ ಬ್ಯಾಂಕ್‍ವರೆಗೂ ಬಂದಿದ್ದರು. ಈ ವೇಳೆಗಾಗಲೇ ವಿಷಯ ತಿಳಿದು ನೂರಾರು ಮಂದಿ ಬ್ಯಾಂಕ್ ಮುಂದುಗಡೆ ಜಮಾಯಿಸಿದ್ರು.
Advertisement
Advertisement
ಹಗಲಲ್ಲಿ ಹಣ ಸಾಗಿಸದೇ ಮಧ್ಯರಾತ್ರಿ ಏಕೆ ಸಾಗಿಸಿದ್ದೀರಾ ಅಂತಾ ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು. ಮಾಜಿ ಶಾಸಕ ಅನ್ನದಾನಿ, ಚುನಾವಣಾಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ರಾತ್ರಿಯೆಲ್ಲಾ 20 ಕೋಟಿ ಹಣದ ಎಣಿಕೆ ಕೂಡ ನಡೆಯಿತು. ನಂತರ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿ ಚುನಾವಣಾಧಿಕಾರಿಗಳು ಹಣವನ್ನು ಸೀಜ್ ಮಾಡಿದ್ದಾರೆ.
Advertisement
ರಾತ್ರಿ ವೇಳೆಯಲ್ಲಿ ಹಣ ಸಾಗಾಟಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅನ್ನದಾನಿ ಅನುಮಾನ ವ್ಯಕ್ತಪಡಿಸಿದ್ದು, ಬ್ಯಾಂಕ್ ಹೆಸರಲ್ಲಿ ಚುನಾವಣೆ ಖರ್ಚಿಗೆ ಹಣ ವರ್ಗಾವಣೆ ಆಗುತ್ತಿದೆ ಅಂತಾ ಆರೋಪಿಸಿದ್ದಾರೆ.