– ಬೆಂಗಳೂರು ಸ್ಪೇಷಲ್ ವೊಟರ್ಸ್ ಗೆ ಬಂಪರ್
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹೊಸ ಪ್ಲಾನ್ ಮಾಡಿದೆ. ಬೆಂಗಳೂರಿನ ವಿಕಲಚೇತನರಿಗೆ ವಿಶೇಷ ಸೌಲಭ್ಯ ನೀಡಲು ಚಿಂತನೆ ನಡೆದಿದೆ.
ಹೌದು. ತಪ್ಪದೇ ಮತದಾನ ಮಾಡಿ, ನಿಮಗೆ ಮತ ಹಾಕಲು ಆಸೆಯಿದ್ದರೂ ಮತಗಟ್ಟೆಗೆ ಬರಲು ಕಷ್ಟವಿರುವ ವಿಕಲಚೇತನರಿಗಾಗಿ ಹೊಸ ಸವಲತ್ತು ರೆಡಿ ಇದೆ. ಮತದಾನ ಮಾಡಲು ನಿಮ್ಮನ್ನು ಕರೆದೊಯ್ಯಲು ಮನೆ ಬಾಗಿಲಿಗೆ ಕ್ಯಾಬ್ ಬರುತ್ತದೆ. ನಂತರ ಮತಗಟ್ಟೆ ಕರೆದುಕೊಂಡು ಮತ ಹಾಕಿಸುತ್ತಾರೆ. ಇದು ಚುನಾವಣಾ ಆಯೋಗದ ಹೊಸ ಐಡಿಯಾವಾಗಿದೆ.
Advertisement
Advertisement
ಈ ರೀತಿಯ ಪ್ಲಾನ್ ಗೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಖಾಸಗಿ ಕ್ಯಾಬ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ಪ್ರಕಾರ ಉಚಿತವಾಗಿ ವಿಕಲಚೇತರನ್ನ ಮನೆಯಿಂದಲೇ ಕರೆದುಕೊಂಡು ಮತಗಟ್ಟೆಯಲ್ಲಿ ಮತದಾನ ಮಾಡಿ ಮತ್ತೆ ಮನೆಗೆ ವಾಪಸ್ಸು ಬಿಡಲು ಒಪ್ಪಂದ ಆಗಿದೆ. ಇದಕ್ಕಾಗಿ ಮತದಾರರು ಯಾವುದೇ ಹಣ ವೆಚ್ಚ ಮಾಡುವಂತಿಲ್ಲ. ಮತದಾನ ಪ್ರಮಾಣ ಹೆಚ್ಚಿಸಲು ಈ ನೂತನ ಐಡಿಯಾ ಮಾಡಲಾಗಿದೆ. ಖಾಸಗಿ ಕ್ಯಾಬ್ ಕಂಪನಿ ಮತದಾನ ಪ್ರಮಾಣ ಹೆಚ್ಚಿಸಲು ಈ ವಾಹನ ಸೇವೆ ಪ್ರಸ್ತಾವನೆ ನೀಡಿತು. ಇರದ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
Advertisement
Advertisement
ಹೊಸ ಸೌಲಭ್ಯ ಪಡೆಯಬೇಕಾದ್ರೆ ಹೀಗೆ ಮಾಡಿ:
ಮೊದಲಿಗೆ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ನಂತರ ವಿಕಲಚೇತನ ವಾಹನ ಸೇವೆ ಬಳಸಲು ರಿಜಿಸ್ಟಾರ್ ಮಾಡಿಸಿಕೊಳ್ಳಿ. ಬಳಿಕ ಮತದಾನ ಬೂತ್ ಹಾಗೂ ಸಮಯವನ್ನ ಖಾತ್ರಿ ಪಡಿಸಿ. ಆಗ ವಿಶೇಷ ಸೇವೆ ಖಾತ್ರಿಗಾಗಿ ವಿಕಲಚೇತನರಿಗೆ ಎಸ್‍ಎಂಎಸ್ ಬರಲಿದೆ. ಅಷ್ಟೇ ಅಲ್ಲದೆ ಮತಗಟ್ಟೆ ಬಳಿ ವ್ಹೀಲ್‍ಚೇರ್ ಸೇವೆ ಕೂಡ ಇದೆ. ನಿಮ್ಮನ್ನ ಪಿಕ್ ಮಾಡಿ ಮತ್ತೆ ಡ್ರಾಪ್ ಮಾಡುತ್ತವೆ.
ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಾರದು. ನಿಗದಿತ ಪಕ್ಷಕ್ಕೆ ಮತ ಹಾಕುವಂತೆ ಒತ್ತಾಯ ಮಾಡುವಂತಿಲ್ಲ. ಈ ಕ್ಯಾಬ್ ಸೇವೆ ನೀಡುವ ಸಂಸ್ಥೆ ಮತದಾನ ಹೆಚ್ಚಿಸುವ ದೃಷ್ಟಿಯನ್ನ ಮಾತ್ರ ಹೊಂದಿರಬೇಕು. ಹೀಗೆ ಹತ್ತಾರು ಷರತ್ತುಗಳನ್ನ ಹಾಕಿ ಖಾಸಗಿ ಕ್ಯಾಬ್ ಸೇವೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.