ಚುನಾವಣಾ ಆಯೋಗ ರಾಜಿಯಾಗಿದೆ, ವ್ಯವಸ್ಥೆಯಲ್ಲಿ ದೋಷವಿದೆ: ಅಮೆರಿಕದಲ್ಲಿ ರಾಹುಲ್‌ ಕಿಡಿ

Public TV
1 Min Read
rahul gandhi

ವಾಷಿಂಗ್ಟನ್‌: ಅಮೆರಿಕ ಪ್ರವಾಸದಲ್ಲಿರುವ (USA Tour) ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಮತ್ತೆ ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ದೂರಿದ್ದಾರೆ.

ಬೋಸ್ಟನ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗವು (Election Commission) ರಾಜಿ ಮಾಡಿಕೊಂಡಿದ್ದು ಮತ್ತು ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂದು ಹೇಳಿದರು. ಇದನ್ನೂ ಓದಿ: ಓಂ ಪ್ರಕಾಶ್ ಸಾವಿಗೆ ಉತ್ತರ ಕನ್ನಡದಲ್ಲಿದ್ದ ಆಸ್ತಿಯ ಕಲಹ ಕಾರಣವಾಯ್ತೇ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ವಯಸ್ಕರಿಗಿಂತ ಹೆಚ್ಚಿನ ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗವು ಸಂಜೆ 5:30 ಕ್ಕೆ ಮತದಾನದ ಅಂಕಿಅಂಶವನ್ನು ನೀಡಿತು ಮತ್ತು ಸಂಜೆ 5:30 ರಿಂದ 7:30 ರ ನಡುವೆ 65 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಇದು ಭೌತಿಕವಾಗಿ ಸಂಭವಿಸುವುದು ಅಸಾಧ್ಯ ಎಂದು ಹೇಳಿದರು. ಇದನ್ನೂ ಓದಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ – ಯಾರಿಗೆ ಎಷ್ಟು ಕೋಟಿ? ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

ಒಬ್ಬ ಮತದಾರ ಮತ ಚಲಾಯಿಸಲು ಸುಮಾರು 3 ನಿಮಿಷಗಳನ್ನು ತೆಗೆದುಕೊಳ್ಳುತ್ತಾನೆ. ಇನ್ನು ಲೆಕ್ಕಾಚಾರ ಮಾಡಿದರೆ ಬೆಳಗ್ಗೆ 2 ಗಂಟೆಯವರೆಗೆ ಸಾಲುಗಳು ಇರಬೇಕಾಗುತ್ತದೆ. ಆಯೋಗದ ಬಳಿ ವಿಡಿಯೋ ಚಿತ್ರೀಕರಣ ನೀಡುವಂತೆ ಕೇಳಿದಾಗ ನಿರಾಕರಿಸಿದ್ದು ಮಾತ್ರವಲ್ಲದೇ ಕಾನೂನನ್ನು ಸಹ ಬದಲಾಯಿಸಿತ್ತು ಎಂದು ದೂರಿದರು.

Share This Article