ಬೆಂಗಳೂರು: ಚುನಾವಣೆಯಲ್ಲಿ ಕಿಕ್ ಏರಿಸಿಕೊಳ್ಳೋಣ ಅನ್ನೋರ ನಶೆಯಿಳಿಸುವ ರೂಲ್ಸ್ ಅನ್ನು ಚುನಾವಣಾ ಆಯೋಗ ಮಾಡಿದೆ.
ಬಾರ್ ಗಳು ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳಿಗೆ ಬೆಂಡಾಗಿದೆ. ಬಾರ್ ನವರು ಪ್ರತಿ ದಿನದ ಮದ್ಯಮಾರಾಟದ ಸಂಪೂರ್ಣ ವಿವರವನ್ನು ಅಬಕಾರಿ ಇಲಾಖೆ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ.
Advertisement
ಅಷ್ಟೇ ಅಲ್ಲದೇ ಕಳೆದ ವರ್ಷ ಇದೇ ದಿನ ಎಷ್ಟು ಎಣ್ಣೆ ಸೇಲ್ ಆಗಿತ್ತು ಅನ್ನೋ ಮಾಹಿತಿನೂ ನೀಡಬೇಕು. ಕಳೆದ ವರ್ಷಕ್ಕೆ ತಾಳೆ ಹಾಕಿ ಶೇ 10ಕ್ಕಿಂತ ಮದ್ಯವ್ಯಾಪಾರ ಹೆಚ್ಚಾದರೇ ಅಂತಹ ಬಾರ್ ಗಳಿಗೆ ನೋಟಿಸ್ ಕೊಟ್ಟು ಬೀಗ ಜಡಿಯುವ ಹೊಸ ನಿಯಮವನ್ನು ಮಾಡಿದೆ.
Advertisement
ಈಗಾಗಲೇ ಬೆಂಗಳೂರಿನ ಎಂಟು ಬಾರ್ ಗಳಿಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಇದರಿಂದ ಚುನಾವಣೆ ಸಮಯದಲ್ಲಿ ಭರ್ಜರಿ ಜೇಬು ತುಂಬಿಸಬಹುದು ಅನ್ನೋ ನಿರೀಕ್ಷೆಯಿಟ್ಟುಕೊಂಡಿದ್ದ ಬಾರ್ ಮಾಲೀಕರ ಲೆಕ್ಕಚಾರ ತಲೆಕೆಳಗಾಗಿದೆ.
Advertisement