ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಹಾಕಿದ್ದ ಮೊದಲ ಮತ ಅಸಿಂಧು ಆಗಿದೆ.
ಸುಮಲತಾ ಅವರಿಗೆ ಮೊದಲ ಅಂಚೆ ಮತ ಹಾಕಿದ್ದ ಯೋಧನ ಮತವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಮಂಡ್ಯ ಮೂಲದ ಸಿಆರ್‌ಪಿಎಫ್ ಯೋಧ ರಾಜನಾಯಕ್ ಮತವನ್ನು ಆಯೋಗ ಅಸಿಂಧುಗೊಳಿಸಿದೆ.
Advertisement
ರಾಜನಾಯಕ್ ಅಂಚೆ ಮತದಾನ ಮೂಲಕ ಸುಮಲತಾ ಅವರಿಗೆ ಮತ ಹಾಕಿದ್ದರು. ಯೋಧ ತಾನು ಸುಮಲತಾಗೆ ಮತ ಹಾಕಿದ್ದನ್ನ ಸೆಲ್ಫಿ ಮೂಲಕ ಫೇಸ್‍ಬುಕ್‍ಗೆ ಹಾಕಿ ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮತದಾನದ ಗೌಪ್ಯತೆ ಹಾಳುಮಾಡಿದ್ದಕ್ಕೆ ಯೋಧನ ಮತವನ್ನು ಚುನಾವಣಾ ಆಯೋಗ ಅಸಿಂಧುಗೊಳಿದೆ.
Advertisement
Advertisement
ಗೌಪ್ಯ ಮತದಾನವನ್ನು ಮರೆತು ಹಕ್ಕಿನ ದುರ್ಬಳಕೆ ಬಹಿರಂಗಗೊಳಿಸದ್ದಕ್ಕೆ ಯೋಧನ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಯೋಧನ ಮತವನ್ನು ಅಸಿಂಧುಗೊಳಿಸಿ ಶಿಸ್ತು ಕ್ರಮಕೈಗೊಂಡಿದೆ.
Advertisement
ಪೋಸ್ಟ್‌ನಲ್ಲಿ ಏನಿತ್ತು?
ಯುಗಾದಿ ಹಬ್ಬದ ದಿನ ನಿಮ್ಮ ಸಿಆರ್‌ಪಿಎಫ್ ಯೋಧನಿಂದ ಸುಮಲತಾ ಅಂಬರೀಶ್ ಮೇಡಂ ಅವರಿಗೆ ಮೊದಲನೇ ವೋಟ್ ಹಾಕುವುದರ ಮೂಲಕ ಅವರಿಗೆ ಒಳ್ಳೆದಾಗಲಿ. ಲೀಡಿಂಗ್‍ನಿಂದ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇದೆ. ನಮ್ಮ ಮಂಡ್ಯ ತುಂಬಾ ಅಭಿವೃದ್ಧಿ ಹೊಂದಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದು ನಿಲ್ಲಬೇಕು. ನಮ್ಮ ರೈತರು ಕಷ್ಟದಿಂದ ಹೊರಗೆ ಬರಬೇಕು. ನಮ್ಮಂತ ಯೋಧರ ಕುಟುಂಬಕ್ಕೆ ಒಳ್ಳೆದಾಗಬೇಕು. ಈ ಹಿಂದೆ ನಮ್ಮ ಅಂಬರೀಶ್ ಅಣ್ಣ ಮಂಡ್ಯಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ. ಅವರ ಪ್ರೀತಿ ನಿಮ್ಮಲ್ಲಿದೆ ದಯವಿಟ್ಟು ಎಲ್ಲರು ಸುಮಲತಾ ಅವರಿಗೆ ಸಪೋರ್ಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ತಾವು ಮತ ಮಾಡಿದ್ದ ಫೋಟೋ ಪೋಸ್ಟ್ ಮಾಡಿದ್ದರು.