Connect with us

ಶಾಸಕ ಶಿವರಾಜ ತಂಗಡಗಿಯ ಸುಳ್ಳು ಭರವಸೆಯಿಂದ ಬೇಸತ್ತ ಜನ- ಚುನಾವಣೆ ಬಹಿಷ್ಕರಿಸಲು ನಿರ್ಧಾರ

ಶಾಸಕ ಶಿವರಾಜ ತಂಗಡಗಿಯ ಸುಳ್ಳು ಭರವಸೆಯಿಂದ ಬೇಸತ್ತ ಜನ- ಚುನಾವಣೆ ಬಹಿಷ್ಕರಿಸಲು ನಿರ್ಧಾರ

ಕೊಪ್ಪಳ: ರಾಜ್ಯದಲ್ಲಿ ಅಲಕ್ಷಿತ ಹಿಂದುಳಿದ ಅಲೆಮಾರಿ ಜನಾಂಗವಾಗಿರುವ ಸಿಂಧೋಳಿ ಸಮಾಜವು ರಾಜಕೀಯ ನಾಯಕರ ಆಶ್ವಾಸನೆಗೆ ಸಿಲುಕಿ ತಮ್ಮ ಬದುಕನ್ನು ಬೀದಿಗೆ ತಂದುಕೊಂಡಿದ್ದಾರೆ.

ಸತತ 2 ಬಾರಿ ಸಚಿವರಾಗಿ ಪ್ರಸ್ತುತ ಶಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶಾಸಕ ಶಿವರಾಜ ತಂಗಡಗಿ ತನ್ನ ಕ್ಷೇತ್ರದಲ್ಲಿರುವ ಅಲೆಮಾರಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಕಾರಟಗಿಯ ತನ್ನ ಮನೆಯ ಹಿಂದೆಯೇ ಇರುವ ಅಲೇಮಾರಿ ಜನರು ಶಾಸಕರ ಕಣ್ಣಿಗೆ ಕಾಣಿಸಲಿಲ್ಲಾ ಅಂತಾ ಕಾಣ್ಸುತ್ತೆ. ಅದರ ಪ್ರಭಾವವೇ ಇಂದಿಗೂ ಕೂಡ ಈ ಜನಾಂಗ ಇರೋದಕ್ಕೆ ಸೂರಿಲ್ಲದೆ, ಒಡಾಡೋಕೆ ರಸ್ತೆಗಳಿಲ್ಲದೆ ಹಾಗೂ ಕುಡಿಯೋಕೆ ನೀರಿಲ್ಲದೆ, ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಇಲ್ಲಿ ದಿನನಿತ್ಯ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ.

ಮುಂಜಾನೆ ಎದ್ದು ಶಾಸಕರು ತಮ್ಮ ಮನೆಯ ಬಾಗಿಲು ತೆಗೆದರೆ ಸಾಕು ಅಲೆಮಾರಿಗಳ ಕಷ್ಟ ಕಣ್ಣಿಗೆ ಕಾಣಿಸುತ್ತದೆ. ಆದರೆ ಶಾಸಕರು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಿಂಧೋಳಿ ಜನಾಂಗದವರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ 40 ವರ್ಷದಿಂದ ವಾಸವಾಗಿದ್ದಾರೆ. ಕಳೆದ ಬಾರಿ ಚುನಾವಣೆ ಬಂದಾಗ ಶಾಸಕ ಶಿವರಾಜ ತಂಗಡಗಿ ಇವರಿಗೆ ಸುಂದರವಾದ ಬದುಕು ಕಟ್ಟಿಕೊಳ್ಳಲು ಏನು ಬೇಕು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿಕೊಡೋದಾಗಿ ಭರವಸೆ ಕೊಟ್ಟು ಹೊಗ್ಗಿದ್ದರು. ಆದ್ರೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸಚಿವರು ಕೂಡ ಆದ್ರೂ ಯಾವ ವ್ಯವಸ್ಥೆಯನ್ನು ಇವರಿಗೆ ಕಲ್ಪಿಸಿಲ್ಲ. ಇದೀಗ ಮತ್ತೆ ಚುನಾವಣೆ ಬಂದಿದೆ. ಶಾಸಕರು ತಮಗೆ ನೀಡಿದ ಸುಳ್ಳು ಭರವಸೆಯಿಂದ ಬೇಸತ್ತಿರುವ ಜನರು ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸಲು ಸಿದ್ಧರಾಗಿದ್ದಾರೆ.

Advertisement
Advertisement