ಸ್ಯಾಂಡಲ್ ವುಡ್ ನಲ್ಲೂ ರಂಗೇರಿದ ಚುನಾವಣೆ ಚಟುವಟಿಕೆ: ಯಾರು, ಯಾವ ಕ್ಷೇತ್ರ?

Public TV
2 Min Read
FotoJet 67

ವಿಧಾನಸಭಾ (Assembly) ಚುನಾವಣೆ (Election) ಘೋಷಣೆಯಾದ ಬೆನ್ನಲ್ಲೇ ಚಿತ್ರರಂಗದಲ್ಲೂ ಅದರ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ನಾನಾ ರೀತಿಯ ಚಟುವಟಿಕೆಗಳು ಕೂಡ ಗರಿಗೆದರಿವೆ. ಈಗಾಗಲೇ ಸುಮಲತಾ ಅಂಬರೀಶ್, ತಾರಾ, ಜಗ್ಗೇಶ್, ಬಿ.ಸಿ.ಪಾಟೀಲ್, ಕುಮಾರ ಬಂಗಾರಪ್ಪ, ಮುಖ್ಯಮಂತ್ರಿ ಚಂದ್ರು, ಟೆನ್ನಿಸ್ ಕೃಷ್ಣ, ಶ್ರುತಿ, ಜಯಮಾಲಾ, ಉಮಾಶ್ರೀ, ಸಾಯಿಕುಮಾರ್, ಅನಂತ್ ನಾಗ್, ನಿಖಿಲ್ ಕುಮಾರಸ್ವಾಮಿ, ಪೂಜಾ ಗಾಂಧಿ ನೇರವಾಗಿ ನಾನಾ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರೆ, ಇನ್ನೂ ಅಚ್ಚರಿಯ ಹೆಸರುಗಳು ಪಕ್ಷಕ್ಕೆ ಆಗಮಿಸುತ್ತಿರುವ ಕುರಿತು ಮಾಹಿತಿಗಳು ಹೊರಬೀಳುತ್ತಿವೆ.

Jaggesh 3

ಎರಡ್ಮೂರು ವಾರಗಳ ಹಿಂದೆಯಷ್ಟೇ ಅನಂತ್ ನಾಗ್ (Anant Nag) ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಈ ಕುರಿತು ಬಿಜೆಪಿ ಮುಖಂಡರು ಕೂಡ ಮಾಹಿತಿ ಹಂಚಿಕೊಂಡಿದ್ದರು. ಕೊನೆ ಕ್ಷಣದಲ್ಲಿ ಅನಂತ್ ನಾಗ್ ಬಿಜೆಪಿ ಸೇರಿಕೊಳ್ಳಲೇ ಇಲ್ಲ. ನಡೆಯಬೇಕಿದ್ದ ಕಾರ್ಯಕ್ರಮ ಅವರ ಅನುಪಸ್ಥಿತಿಯಲ್ಲಿ  ನೆರವೇರಿತು. ಆದರೆ, ಅವರು ಗೈರಿಗೆ ಕಾರಣವನ್ನು ಯಾರೂ ನೀಡಲಿಲ್ಲ. ಸ್ವತಃ ಅನಂತ್ ನಾಗ್ ಅವರೇ ಈ ಕುರಿತು ಮಾತನಾಡಲಿಲ್ಲ. ಇದನ್ನೂ ಓದಿ: ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

meghana raj

ಈಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದೆ. ನಟ ಮೇಘನಾ ರಾಜ್ ಸರ್ಜಾ (Meghana Raj Sarja) ಬಿಜೆಪಿಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಈ ಕುರಿತು ಅವರು ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನುವ ಸುದ್ದಿಯೂ ಬಲವಾಗಿ ಕೇಳಿ ಬರುತ್ತಿದೆ. ಮೇಘನಾ ತಂದೆ ತಾಯಿ ಒಪ್ಪಿದ್ದಾರೆ ಎಂದು, ಸರ್ಜಾ ಕುಟುಂಬ ಒಪ್ಪಿಲ್ಲ ಎನ್ನುವ ಸುದ್ದಿಗಳು ರೆಕ್ಕೆಪುಕ್ಕದೊಂದಿಗೆ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಆದರೆ, ಮೇಘನಾ ಈ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹಾಗಾಗಿ ಅವರೇ ಈ ಕುರಿತು ಅಧಿಕೃತ ಮಾಹಿತಿ ಕೊಡಬೇಕು.

ramya 5 2

ಈ ನಡುವೆ ನಟಿ ರಮ್ಯಾ (Ramya) ಅವರ ಹೆಸರು ಆಗಾಗ್ಗೆ ಕೇಳಿ ಬರುತ್ತಿದೆ. ಈ ಬಾರಿ ಕಾಂಗ್ರೆಸ್ ನಿಂದ ರಮ್ಯಾ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಪದ್ಮನಾಭ ನಗರ, ಮಂಡ್ಯ ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ರಮ್ಯಾ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಕೂಡ ಅಧಿಕೃತವಾಗಬೇಕು.

ABHISHEK SUMALATHA

ನಾನು ರಾಜಕಾರಣದಲ್ಲಿ ಇರುವತನಕ ನನ್ನ ಪುತ್ರ ಅಭಿಷೇಕ್ (Abhishek Ambarish) ಚುನಾವಣೆ ಕಣದಲ್ಲಿ ಇರುವುದಿಲ್ಲ ಎಂದು ಸ್ವತಃ ಸುಮಲತಾ ಅಂಬರೀಶ್ ಅವರೇ ಹೇಳಿದ್ದರೂ, ಆಗಾಗ್ಗೆ ಅಭಿಷೇಕ್ ಹೆಸರು ಚುನಾವಣೆಯ ಅಖಾಡದಲ್ಲಿ ಕೇಳಿ ಬರುತ್ತಿದೆ. ಮಂಡ್ಯ ಜಿಲ್ಲೆಯಲ್ಲೇ ಒಂದು ಕ್ಷೇತ್ರವನ್ನು ಅಭಿಷೇಕ್ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಮಂಡ್ಯ ರಾಜಕೀಯ ವಲಯದ ಮಾತು. ಆದರೆ, ಅಭಿಷೇಕ್ ಚುನಾವಣೆಗೆ ನಿಲ್ಲಲಾರರು ಎನ್ನುವುದು ಅವರ ಆಪ್ತರು ಪ್ರತಿಕ್ರಿಯೆ.

K MANJU

ಈ ಹಿಂದೆ ರಾಜಕಾರಣ ಪ್ರವೇಶಿಸಿರುವ ನಿರ್ಮಾಪಕ ಕೆ.ಮಂಜು ಈ ಬಾರಿ ಪದ್ಮನಾಭ ನಗರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವ ಪಕ್ಷದಿಂದ ಅವರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲವಾದ್ದರೂ, ಈ ಸುದ್ದಿಯಂತೂ ಬಲವಾಗಿ ಕೇಳಿ ಬರುತ್ತಿದೆ. ಯಾವ ಪಕ್ಷದಿಂದ ಇವರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

AAP 1

ಈಗಾಗಲೇ ಆಮ್ ಆದ್ಮಿ ಪಾರ್ಟಿ ಕನ್ನಡದ ನಟ ಟೆನ್ನಿಸ್ ಕೃಷ್ಣ ಮತ್ತು ನಿರ್ದೇಶಕ ಸ್ಮೈಲ್ ಶ್ರೀನು ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಟೆನ್ನಿಸ್ ಕೃಷ್ಣ ಅವರು ತುರುವೇಕೆರೆಯಿಂದ ಸ್ಪರ್ಧಿಸುತ್ತಿದ್ದರೆ, ಸ್ಮೈಲ್ ಶ್ರೀನು ಅವರಿಗೆ (ಶ್ರೀನಿವಾಸ್ ಎನ್) ಕೂಡ್ಲಿಗಿ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗಿದೆ. ಇಬ್ಬರೂ ಹಲವಾರು ದಿನಗಳಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕೂಡ ಆರಂಭಿಸಿದ್ದಾರೆ.

Share This Article