ನವದೆಹಲಿ: ಚುನಾವಣೆಯಲ್ಲಿ ನಾವು ಈಗಾಗಲೇ ಬಹುಮತಕ್ಕೆ ಬೇಕಾಗಿರುವ ಸ್ಥಾನಗಳ ಗಡಿ ದಾಟಿದ್ದು, 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳನ್ನು ಈ ಬಾರಿ ನಾವು ಗುಡಿಸಿ ಹಾಕುತ್ತೇವೆ. ವಿರೋಧ ಪಕ್ಷಗಳಲ್ಲಿ ನಾಯಕ ಯಾರಾಗಬೇಕು ಎನ್ನುವುದರ ಬಗ್ಗೆ ಅವರು ಸಭೆ ಕರೆದಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement
ನೀವು ಪದೇ ಪದೇ ನನ್ನ ಬಳಿ ಎಷ್ಟು ಸ್ಥಾನವನ್ನು ಗೆಲ್ಲಲ್ಲಿದ್ದೀರಿ ಎನ್ನುವ ಪ್ರಶ್ನೆಯನ್ನು ಕೇಳುತ್ತಲೇ ಇದ್ದೀರಿ. ನಾನು ದೇಶವನ್ನು ಸುತ್ತಿದ್ದು ಜನರ ಪ್ರತಿಕ್ರಿಯೆ ಗಮನಿಸಿದ್ದೇನೆ. 5 ಮತ್ತು 6ನೇ ಹಂತದ ಚುನಾವಣೆಯ ಬಳಿಕ ಬಿಜೆಪಿ ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಗಳಿಸಿದ್ದು, 7ನೇ ಹಂತದ ಬಳಿಕ 300ರ ಗಡಿ ದಾಟಲಿದೆ. ಎನ್‍ಡಿಎ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಲೋಕಸಭೆಯ ವಿರೋಧ ಪಕ್ಷಕ್ಕೆ ಬೇಕಾಗಿರುವಷ್ಟು ಸ್ಥಾನವನ್ನು ಈ ಬಾರಿ ಯಾರು ಗೆಲ್ಲುವುದಿಲ್ಲ. ಹೀಗಾಗಿ ವಿರೋಧ ಪಕ್ಷದ ನಾಯಕರು ಯಾರಾಗಬೇಕು ಎನ್ನುವ ಬಗ್ಗೆ ಅವರು ಸಭೆ ನಡೆಸುತ್ತಿದ್ದಾರೆ ಎಂದು ಹೇಳಿದರು.
Advertisement
543 ಸ್ಥಾನಗಳಿರುವ ಲೋಕಸಭೆಯಲ್ಲಿ ಬಹುಮತ ಪಡೆಯಬೇಕಾದರೆ 272 ಸ್ಥಾನಗಳನ್ನು ಪಕ್ಷ/ ಮೈತ್ರಿಕೂಟ ಗೆಲ್ಲಬೇಕು. 2014ರ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 282 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನ ಪಡೆಯಬೇಕಾದರೆ ಪಕ್ಷವನ್ನು ಕನಿಷ್ಠ ಶೇ.10 ರಷ್ಟು ಸ್ಥಾನಗಳನ್ನು ಗೆಲ್ಲಬೇಕು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿತ್ತು. ಹೀಗಾಗಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ಮಾನ್ಯತೆ ಸಿಕ್ಕಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕರಾಗಿ ಆಯ್ಕೆ ಆಗಿದ್ದರು.