ನವದೆಹಲಿ: ಸಿಖ್ ವ್ಯಕ್ತಿಯೊಬ್ಬರು ಬಸ್ ಸ್ಟಾಪ್‍ನಲ್ಲಿ ನಿಂತು ಜನರಿಗೆ ಗ್ಲಾಸಿನಲ್ಲಿ ನೀರು ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಜೀಹರ್ ಪ್ರೀತ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಜನರು ವ್ಯಕ್ತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
ಸರ್ದಾರ್‌ಜೀ ತನ್ನ ಸ್ಕೂಟರ್ ಮೇಲೆ ನೀರಿನ ಕ್ಯಾನ್ ಇಟ್ಟುಕೊಂಡಿದ್ದಾರೆ. ಅಲ್ಲದೆ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕರಿಗೆ ನೀರು ಕುಡಿಯುತ್ತೀರಾ ಎಂದು ಕೇಳುತ್ತಿದ್ದಾರೆ. ನೀರು ಕೊಡಿ ಎಂದು ಕೇಳಿದವರಿಗೆ ಸರ್ದಾರ್‌ಜೀ ತಮ್ಮ ಕೈಯಾರೆ ಗ್ಲಾಸಿನಲ್ಲಿ ನೀರು ಕೊಟ್ಟಿದ್ದಾರೆ. ಅಲ್ಲದೆ ಕೆಲವರು ತಮ್ಮ ಬಳಿಯಿದ್ದ ಬಾಟಲಿನಲ್ಲಿ ನೀರು ತುಂಬಿಸಿಕೊಂಡು ಹೋಗಿದ್ದಾರೆ.
Advertisement
Advertisement
ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ, ಈ ಸುಡುವ ಬಿಸಿಲಿನಲ್ಲಿ ಸರ್ದಾರ್‌ಜೀ ಒಬ್ಬರೇ ನೀರು ಕೊಡುತ್ತಾ ಎಲ್ಲರ ದಾಹ ತಣಿಸುತ್ತಿದ್ದಾರೆ ಎಂದು ಕ್ಯಾಪ್ಷನ್ ಕೊಟ್ಟು ಟ್ವೀಟ್ ಮಾಡಿದ್ದಾರೆ.
Advertisement
ಈ ವಿಡಿಯೋ ಇದುವರೆಗೂ 68 ಸಾವಿರಕ್ಕೂ ಹೆಚ್ಚು ವ್ಯೂ, 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 2 ಸಾವಿರಕ್ಕೂ ಹೆಚ್ಚು ರೀ-ಟ್ವೀಟ್‍ಗಳು ಪಡೆದುಕೊಂಡಿದೆ. ಈ ವಿಡಿಯೋ ನೋಡಿ ಮೆಚ್ಚಿದ ಜನರು ಕಮೆಂಟ್ ಮೂಲಕ ಸರ್ದಾರ್‌ಜೀ ಅವರನ್ನು ಹೊಗಳಿದ್ದಾರೆ.
ಸರ್ದಾರ್‌ಜೀ ಕೆಲಸ ನೋಡಿ ಕೆಲವರು, ಈ ರೀತಿಯ ಜನರು ಈಗಲು ಇದ್ದಾರಾ? ನಂಬುವುದಕ್ಕೆ ಆಗುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಸರ್ದಾರ್‌ಜೀ ಈ ವಯಸ್ಸಿನಲ್ಲಿ ದೆಹಲಿಯ ಬಿಸಿಲಿಗೆ ಈ ರೀತಿ ಕೆಲಸ ಮಾಡುತ್ತಿರುವುದಕ್ಕೆ ಹ್ಯಾಟ್ಸ್ ಆಫ್ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/ZeHarpreet/status/1135498221587853313?ref_src=twsrc%5Etfw%7Ctwcamp%5Etweetembed%7Ctwterm%5E1135498221587853313&ref_url=https%3A%2F%2Fwww.timesnownews.com%2Fthe-buzz%2Farticle%2Fsingh-is-king-elderly-sikh-man-beats-delhi-heat-serves-water-to-thirsty-commuters-watch%2F432690