ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಗೂಳಿ ದಾಳಿ ಮಾಡಿದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಹುಲಿಮಂಗಲ ಗ್ರಾಮದಲ್ಲಿ ನಡೆದಿದೆ.
ಹುಲಿಮಂಗಲ ಗ್ರಾಮದ ಮೂಲದ ರಾಮರೆಡ್ಡಿ (57) ಮೃತ ವೃದ್ಧ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹಳಿಗೆ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – 2 ಡೆತ್‌ನೋಟ್ ಪತ್ತೆ
ಸಾಮಾನ್ಯವಾಗಿ ಪ್ರತಿದಿನ ವೃದ್ಧ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರು. ಇಂದು ಮದ್ಯಾಹ್ನ 3 ಗಂಟೆ ಸಮಯದಲ್ಲಿ ಕೂಡ ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗೂಳಿ ದಾಳಿ ನಡೆಸಿದ್ದು, ಪರಿಣಾಮ ವೃದ್ಧ ಸಾವನ್ನಪ್ಪಿದ್ದಾರೆ.
ಗೂಳಿ ದಾಳಿ ನಡೆಸಿರುವ ದೃಶ್ಯ ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೂಳಿ ದಾಳಿ ನಡೆಸಿದ್ದು ಸ್ಥಳೀಯರಲ್ಲೇ ಭಯದ ವಾತಾವರಣ ಸೃಷ್ಟಿ ಮಾಡಿದೆ. ಈ ಸಂಬಂಧ ಹೆಬ್ಬಗೋಡು (Hebbagodu) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ದಟ್ಟ ಮಂಜು – ನಾಲ್ಕನೇ ಟಿ20 ಪಂದ್ಯ ರದ್ದು

