ರಾಯಚೂರು: ಕಳೆದ ನಾಲ್ಕು ತಿಂಗಳಿಂದ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ (Pension) ಹಣ ಬಾರದೆ ಜಿಲ್ಲೆಯ ವೃದ್ಧ ದಂಪತಿ ಪರದಾಟ ನಡೆಸಿದ್ದಾರೆ.
ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣ ನಿವಾಸಿಗಳಾದ 75 ವರ್ಷದ ಬಸಮ್ಮ ಕರಿಯಪ್ಪ ಅವರಿಗೆ ಪಿಂಚಣಿ ಸಮಸ್ಯೆ ಎದುರಾಗಿದ್ದು, ನಾಲ್ಕು ತಿಂಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಇಳಿವಯಸ್ಸಿನ ದಂಪತಿ ತಮ್ಮ ಔಷಧಿ ಖರ್ಚಿಗೂ ಹಣವಿಲ್ಲದೆ ಪರದಾಡುತ್ತಿದ್ದಾರೆ.ಇದನ್ನೂ ಓದಿ: BBK 11: ಕೊಟ್ಟ ಮಾತಿನಂತೆ ಹನುಮಂತನಿಗೆ ಗಿಫ್ಟ್ ಕಳುಹಿಸಿದ ಕಿಚ್ಚ
ಒಂದೇ ಪಟ್ಟಣದ ಒಂದೇ ಹೆಸರಿನ ಇನ್ನೋರ್ವ ವೃದ್ಧೆಗೆ ಇವರ ಪಿಂಚಣಿ ಹಣ ಹೋಗುತ್ತಿರುವುದಾಗಿ ಆರೋಪಿಸಿದ್ದಾರೆ. ಅದೇ ಪಟ್ಟಣದ ಬಸಮ್ಮ ಕರಿಯಪ್ಪ ಎಂಬ ಹೆಸರಿರುವ ಇನ್ನೋರ್ವ ವೃದ್ಧೆಯ ಖಾತೆಗೆ ಇವರ ಆಧಾರ್ ಕಾರ್ಡ್ ಲಿಂಕಾಗಿದೆ. ಹಾಗಾಗಿ ಹಣ ಬರುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಂಪ್ಯೂಟರ್ ಆಪರೇಟರ್ ಯಡವಟ್ಟಿನಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು ಔಷಧಿ, ಮನೆ ಖರ್ಚಿಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಪಿಂಚಣಿ ಹಣ ಖಾತೆಗೆ ಕೂಡಲೇ ಜಮಾ ಮಾಡುವಂತೆ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಬಳ್ಳಾರಿ| ಶಾಲೆಯ ಪಕ್ಕದ ಹಳ್ಳದಲ್ಲಿದ್ದ ಎರಡು ಮೊಸಳೆ ಸೆರೆ