ಧಾರವಾಡ: ಕಿರಿಯ ಸಹೋದರನ ನಕಲಿ ಮರಣ ಪ್ರಮಾಣ ಪತ್ರ ತೆಗೆಸಿ ಆಸ್ತಿ ಲಪಟಾಯಿಸಲು ಅಣ್ಣನೊಬ್ಬನು ಹೊಂಚು ಹಾಕಿರೋ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.
ಧಾರವಾಡ ತಾಲೂಕಿನ ಮಾಳಮಡ್ಡಿಯ ನಿವಾಸಿಯಾದ ನಾನಾಸಾಹೇಬ್ ದೇಶಪಾಂಡೆ ಅವರು 2012 ರಲ್ಲಿ ಉತ್ತರಾಖಂಡ ಪ್ರವಾಸಕ್ಕೆ ಹೋದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ನಾನಾಸಾಹೇಬ ಸಹೋದರ ರಂಗಾರಾವ್ ದೇಶಪಾಂಡೆ 2000ರಲ್ಲಿಯೇ ತಮ್ಮನ ಮರಣ ಪ್ರಮಾಣಪತ್ರ ತೆಗೆಸಿದ್ದಾನೆ.
ಅಮ್ಮಿನಬಾವಿ ಗ್ರಾಮದ ಬಳಿಯಿರುವ 8 ಎಕರೆ ಜಮೀನು ಲಪಟಾಯಿಸಲು ರಂಗರಾವ್ ಹೊಂಚು ಹಾಕಿದ್ದನು. ಆದರೆ ಇದು ನಾನಾಸಾಹೇಬ ಕುಟುಂಬಸ್ಥರಿಗೆ 2014ರಲ್ಲಿ ಆಸ್ತಿಯನ್ನು ವಿಭಜಿಸುವಾಗ ತಿಳಿದಿದೆ. ಆದ್ರೆ ಇದೂವರೆಗೂ ನಾನಾಸಾಹೇಬ ಪತ್ನಿ ಲಕ್ಷ್ಮೀಬಾಯಿ ಮತ್ತು ಪುತ್ರ ವೆಂಕಟೇಶ್ ಅವರಿಗೆ ಆಸ್ತಿಯನ್ನು ನೀಡಿಲ್ಲ. ಇದೀಗ ರಂಗಾರಾವ್‍ಗೆ ಪಾಲಿಕೆ ಮತ್ತು ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹೇಗೆ ನಕಲಿ ಪ್ರಮಾಣ ಪತ್ರ ನೀಡಿದರು ಎಂದು ನಾನಾಸಾಹೇಬ್ ಪುತ್ರ ವೆಂಕಟೇಶ್ ಪ್ರಶ್ನಿಸುತ್ತಾರೆ.
ಈ ಸಂಬಂಧ ನಾನಾಸಾಹೇಬ ಪುತ್ರ ವೆಂಕಟೇಶ್ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.