ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಹವಾಮಾನ ಇಲಾಖೆ ಶುಭಸುದ್ದಿಯೊಂದನ್ನು ನೀಡಿದೆ. ಆಗಾಗ ಮಳೆಗೆ ಅಡ್ಡಿಪಡಿಸುತ್ತಿದ್ದ ‘ಎಲ್ ನಿನೋ’ ಪ್ರಭಾವದ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಾರಿ ನೈಋತ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಸದ್ಯ ಕೊರೊನಾ ಅಟ್ಟಹಾಸಕ್ಕೆ ರೈತಾಪಿ ವರ್ಗ ನಷ್ಟ ಅನುಭವಿಸುತ್ತಿದೆ. ಭಾರತದಲ್ಲಿ ಮುಕ್ಕಾಲು ಭಾಗ ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನೇ ಅವಲಂಭಿಸಿದ್ದಾರೆ. ಹವಾಮಾನ ಇಲಾಖೆ ಏಪ್ರಿಲ್ ತಿಂಗಳ ಮಳೆ ಮುನ್ಸೂಚನೆ ಬಗ್ಗೆ ವರದಿ ಮಾಡಿದೆ. ಈ ಬಾರಿ ‘ಎಲ್ ನಿನೋ’ ಕಡಿಮೆ ಸಂಭವನೀಯತೆಯನ್ನು ಹೊಂದಿದೆ. ಇದು ಮಳೆಗೆ ಖಂಡಿತವಾಗಿಯೂ ಒಳ್ಳೆಯದು. ಆದರೆ ಸಂಕೀರ್ಣ ಹವಾಮಾನ ವ್ಯವಸ್ಥೆ ಇತರೆ ಹಲವು ಅಂಶಗಳ ಮೇಲೆ ಅವಲಂಭಿಸಿರುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.
Advertisement
Advertisement
ಒಂದು ವೇಳೆ ಜೂನ್-ಸೆಪ್ಟೆಂಬರ್ ತಿಂಗಳ ಮಳೆ ಸಾಮಾನ್ಯವಾಗಿದ್ದರೆ, ಈಗ ಲಾಕ್‍ಡೌನ್‍ನಿಂದ ಬೆಳೆ ಸರಬರಾಜು ಮಾಡಲು ಸಮಸ್ಯೆ ಎದುರಿಸುತ್ತಿರುವ ರೈತರು ಬೇಸಿಗೆ ಬಿತ್ತನೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಇದು ಭಾರತದ ಆರ್ಥಿಕ ಮನೋಭಾವ ಮತ್ತು ದ್ವಿಚಕ್ರ ವಾಹನಗಳು, ಚಿನ್ನ, ಗ್ರಾಹಕರ ಸರಕುಗಳು, ಕಾರುಗಳು ಹಾಗೂ ಟ್ರ್ಯಾಕ್ಟರ್ ಗಳು ಸೇರಿದಂತೆ ಸರಕುಗಳ ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುತ್ತದೆ.
Advertisement
Advertisement
El Nino Southern Oscillation(ಇಎನ್‍ಎಸ್‍ಒ) ಸಮಭಾಜಕ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರನ್ನು ಬೆಚ್ಚಗಿರಿಸುತ್ತದೆ. ಭಾರತೀಯ ಹವಾಮಾನ ಇಲಾಖೆಗೆ(ಐಎಂಡಿ) ಲಭ್ಯವಿರುವ ಮಾಹಿತಿ ಪ್ರಕಾರ, ಸದ್ಯ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಬೆಚ್ಚಗಿದ್ದು, ಇನ್ನು ಮೂರು ತಿಂಗಳ ಅವಧಿಯಲ್ಲಿ ಅದು ತಟಸ್ಥವಾಗಲಿದೆ. ಹೀಗಾಗಿ ಮಳೆ ಉತ್ತಮವಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಕೂಡ ಈ ಬಗ್ಗೆ ವರದಿ ನೀಡಿದ್ದು, ಈ ಬಾರಿ ಇಎನ್‍ಎಸ್‍ಒ ಮಾಹಿತಿ ನಿಖರವಾಗಿದ್ದು, ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ತಟಸ್ಥವಾಗುತ್ತದೆ ಎಂದು ತಿಳಿಸಿದೆ.
ಏನಿದು ಎಲ್ ನಿನೋ?
ಎಲ್ ನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ಪೆರು ಮತ್ತು ಈಕ್ವೆಡಾರ್ ಬಳಿ ಪ್ರಾರಂಭವಾಗುವ ಒಂದು ಹವಾಮಾನ ವೈಪರಿತ್ಯದ ವಿದ್ಯಮಾನವಾಗಿದೆ. ಇದರ ಪ್ರಾರಂಭದ ಸೂಚನೆಯಾಗಿ ಈ ಭಾಗದ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನದ ಸರಾಸರಿಗಿಂತ ಹೆಚ್ಚಾಗಲು ಆರಂಭವಾಗುತ್ತದೆ. ಪೆಸಿಫಿಕ್ ಸಾಗರದ ಮೇಲ್ಮೈ ತಾಪ ಸರಾಸರಿ ಸಹಜ ತಾಪಕ್ಕಿಂತ 0.5-0.9 ಡಿಗ್ರಿ ಸೆಲ್ಸಿಯಸ್ ಇದ್ದರೆ ಅದನ್ನು ದುರ್ಬಲ ಎನ್ ನಿನೋ ಎಂದು ಕರೆಯಲಾಗುತ್ತದೆ. ಎಲ್‍ನಿನೋ 1.5 ಡಿಗ್ರಿಗಿಂತ ಹೆಚ್ಚಿರಬೇಕು ಆಗ ಉತ್ತಮ ಮಳೆ ಆಗುತ್ತದೆ.
ಒಂದು ವೇಳೆ ಪೆಸಿಫಿಕ್ ಮೇಲ್ಮೈ ನೀರು ಬೆಚ್ಚಗಿದ್ದರೆ ಅದು ಶುಷ್ಕ ಹವಾಮಾನಕ್ಕೆ ಕಾರಣವಾಗುತ್ತದೆ. ಇದರಿಂದ ಮಳೆ ಕಡಿಮೆಗೊಳ್ಳುತ್ತದೆ. ಭಾರತದ ಬಹುತೇಕ ಭಾಗದಲ್ಲಿ ಸರಾಸರಿ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ ಅಥವಾ 1 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇತ್ತ ಹಿಂದೂ ಮಹಾಸಾಗರದ ದ್ವಿಧ್ರುವಿ (ಐಓಡಿ)ಎಂದು ಕರೆಯಲ್ಪಡುವ ಮತ್ತೊಂದು ವಿದ್ಯಮಾನವು ತಟಸ್ಥವಾಗಿದೆ. ಈ ವಿದ್ಯಮಾನವು ಹಿಂದೂ ಮಹಾಸಾಗರದ ವಿವಿಧ ಭಾಗಗಳ ನಡುವಿನ ತಾಪಮಾನದಲ್ಲಿನ ವ್ಯತ್ಯಾಸವನ್ನು ತಿಳಿಸುತ್ತದೆ. ಭಾರತೀಯ ಮಾನ್ಸೂನ್‍ಗೆ ಸಕಾರಾತ್ಮಕ ಐಒಡಿ ರೇಟಿಂಗ್ ಸಹಾಯ ಮಾಡುತ್ತದೆ ಎಂದು ಐಎಂಡಿ ಹೇಳಿದೆ. ಕಳೆದ ಬಾರಿ ಐಒಡಿ ರೇಟಿಂಗ್ ಪಾಸಿಟಿವ್ ಇದ್ದ ಕಾರಣಕ್ಕೆ ಜೂನ್ ತಿಂಗಳ ಮೊದಲ ವಾರದಲ್ಲೇ ದಾಖಲೆ ಪ್ರಮಾಣದ ಮಳೆ ಭಾರತದಲ್ಲಿ ಸುರಿದಿತ್ತು.