ಮುಂಬೈ: ಬಹುಭಾಷಾ ನಟಿ ಶ್ರೀದೇವಿ ಅವರು ಹೆಚ್ಚು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದಲೇ ಮೃತಪಟ್ಟಿದ್ದಾರೆ ಎನ್ನುವ ಮಾತು ಈಗ ಕೇಳಿಬಂದಿದೆ.
ಸೌಂದರ್ಯಕ್ಕೆ ಹೆಚ್ಚು ಗಮನಹರಿಸಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಶನಿವಾರ ರಾತ್ರಿ ದುಬೈಯಲ್ಲಿ ಹೃದಯ ಸ್ತಂಭನಗೊಂಡು ಶ್ರೀದೇವಿ ಮೃತಪಟ್ಟಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.
Advertisement
Advertisement
ಜನ ಹೇಳೋದು ಏನು?
ಚರ್ಮದ ಲೇಸರ್ ಶಸ್ತ್ರಚಿಕಿತ್ಸೆ, ಸಿಲಿಕಾನ್ ಸ್ತನ ಸರಿಪಡಿಸುವಿಕೆ, ಮುಖದ ಸೌಂದರ್ಯ ಹೆಚ್ಚಿಸಲು ಮಾಡಿಸಿಕೊಂಡ ಚಿಕಿತ್ಸೆಗಳು ಮತ್ತು ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಂಡ ಔಷಧಿಗಳ ಸೇವನೆ ದೇಹಕ್ಕೆ ಮಾರಕವಾಗಿ ಪರಿಣಮಿಸಿದೆ.
Advertisement
ಈ ಎಲ್ಲಾ ಶಸ್ತ್ರಚಿಕಿತ್ಸೆಗಳಿಂದ ಅವರು ಇನ್ನಷ್ಟು ಯೌವನದಿಂದ ಕಾಣಬಹುದು ಆದರೆ, ತಮ್ಮ ದೇಹದ ಶಕ್ತಿಗೂ ಮೀರಿದ ಶ್ರಮವನ್ನ ಹಾಕಿದರೇ ಅದು ತಡೆದುಕೊಳ್ಳಲು ಸಾಧ್ಯವೇ? ನೈಜ್ಯ ಸೌಂದರ್ಯವನ್ನ ಗೌರವಿಸಿ. ನಿಮ್ಮ ದೇಹವನ್ನ ಗೌರವಿಸಿ. ಇದನ್ನೂ ಓದಿ: ಸಿನಿಮಾ ಕ್ಷೇತ್ರದಲ್ಲಿ ಗ್ಲಾಮರ್ ಗೆ ಪ್ರಾಮುಖ್ಯತೆ ಹೆಚ್ಚು ಯಾಕೆ: ರಕ್ಷಿತಾ ಪ್ರೇಮ್ ಪ್ರಶ್ನೆ
Advertisement
ಯಾವುದೇ ಶಸ್ತ್ರಚಿಕಿತ್ಸೆಗಳನ್ನ ಮಾಡುವಾಗ ಅರವಳಿಕೆ ಮದ್ದು ನೀಡುತ್ತಾರೆ. ನಮ್ಮ ದೇಹದ ಮೇಲೆ ಈ ಮದ್ದಿನ ಪ್ರಭಾವ ಸುಮಾರು 5 ವರ್ಷದವರೆಗೂ ಇರುತ್ತದೆ. ಇದರಿಂದ ಹೃದಯಾಘಾತ ಸಹ ಉಂಟಾಗಬಹುದು.
ಶ್ರೀದೇವಿಯವರು ಹೃದಯ ಸ್ತಂಭನದಿಂದ ಮೃತಪಟ್ಟರೇ? ಅವರ ಅಷ್ಟು ಫಿಟ್ ಆಗಿದ್ದರು ಇದು ಹೇಗೆ ಸಾಧ್ಯ? ಮೂಲಗಳ ಪ್ರಕಾರ ಶ್ರೀದೇವಿ ಅವರು ತುಟಿಯ ಸರ್ಜರಿಯನ್ನು ವಾರಗಳ ಹಿಂದೆ ಮಾಡಿಸಿಕೊಂಡಿದ್ದರು. ಪ್ಲಾಸ್ಟಿಕ್ ಸರ್ಜರಿ ಅವರ ಜೀವವನ್ನೇ ತೆಗೆದುಕೊಂಡಿದೆ.
ಎಕ್ತಾ ಕಪೂರ್ ವಾಗ್ದಾಳಿ:
ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಸಾವಿನ ಕುರಿತು ನಡೆಯುತ್ತಿರುವ ಚರ್ಚೆಗೆ ನಿರ್ಮಾಪಕಿ ಏಕ್ತಾ ಕಪೂರ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ದುಷ್ಟರೇ ನಿಮಗೆ ತಿಳಿದಿರಲಿ ಪ್ರಪಂಚದ 1% ಜನರಿಗೆ ಯಾವುದೇ ಕಾಯಿಲೆ ಮತ್ತು ಶಸ್ತ್ರಚಿಕಿತ್ಸೆ ಆಗದಿದ್ದರೂ ಹೃದಯಾಘಾತವಾಗುತ್ತದೆ. ಇದು ನನ್ನ ವೈದ್ಯರು ನೀಡಿದ ಮಾಹಿತಿ. ಶ್ರೀದೇವಿಯವರ ಸಾವು ಹಣೆಯಲ್ಲಿ ಬರೆದಿದ್ದು, ನಿಮ್ಮಂತವರ ಕೆಟ್ಟ ವದಂತಿಗಳಿಂದಲ್ಲ ಎಂದು ಕಿಡಿಕಾರಿದ್ದಾರೆ.
Evil ones pls realise one percent ( as fwded as my doc told me) of the population can have an cardiac arrest without any heart condition or any kind of surgery ! It’s destiny not how evil rumour mongers portray!!!
— Ektaa R Kapoor (@EktaaRKapoor) February 25, 2018
The strongest women have the weakest hearts sometimes…#RIPSrideviji
— Ektaa R Kapoor (@EktaaRKapoor) February 25, 2018