ಮುಂಬೈ: ಮಹಾರಾಷ್ಟ್ರ (Maharashtra) ಮಾಜಿ ಸಿಎಂ ಮತ್ತು ಶಿವಸೇನೆ (UBT) ನಾಯಕ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ ಗದ್ದಲದ ನಡುವೆ ಮಹಾರಾಷ್ಟ್ರದಲ್ಲಿ ಸಿಎಂ ಏಕನಾಥ್ ಶಿಂಧೆ (Ekanath Shindhe) ಹೆಲಿಕಾಪ್ಟರ್ ತಪಾಸಣೆ ಮಾಡಲಾಗಿದೆ.
ಉದ್ಧವ್ ಠಾಕ್ರೆ (Uddhav Thackeray) ಅವರ ಬ್ಯಾಗ್‌ಗಳನ್ನು ಅಧಿಕಾರಿಗಳು ಯವತ್ಮಾಳ್‌ನಲ್ಲಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನೂ ಅಪ್‌ಲೋಡ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ವಿಡಿಯೋ ಪೋಸ್ಟ್ ಮಾಡಿದೆ. ಠಾಕ್ರೆ ಮಾತ್ರವಲ್ಲ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರ ಬ್ಯಾಗ್‌ಗಳನ್ನೂ ಪರೀಕ್ಷಿಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಅಮೆರಿಕದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ
Advertisement
Advertisement
ಅಧಿಕಾರಿಗಳು ಉದ್ಧವ್ ಠಾಕ್ರೆ ಅವರ ವಸ್ತುಗಳನ್ನು ಪರಿಶೀಲಿಸಿದಾಗ, ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರ ಬ್ಯಾಗ್‌ಗಳನ್ನು ಸಹ ಪರಿಶೀಲಿಸಿದ್ದೀರಾ? ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಮಹಾರಾಷ್ಟ್ರಕ್ಕೆ ಆಗಮಿಸಿದಾಗ ಅವರ ಬ್ಯಾಗ್‌ಗಳನ್ನು ಸಹ ಪರಿಶೀಲಿಸಿದ್ದೀರಾ? ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಬಿ.ಎಸ್ಸಿ ನರ್ಸಿಂಗ್-ಆಪ್ಷನ್ ದಾಖಲಿಗೆ ಮತ್ತಷ್ಟು ಅವಕಾಶ: ಕೆಇಎ
Advertisement
ಮಾದರಿ ನೀತಿ ಸಂಹಿತೆ (MCC) ಜಾರಿಯಲ್ಲಿರುವಾಗ, ಮತದಾರರಿಗೆ ಆಮಿಷ ಒಡ್ಡಲು ಉಡುಗೊರೆಗಳು ಮತ್ತು ನಗದು ವಿತರಣೆಯನ್ನು ತಡೆಯಲು ಚುನಾವಣಾ ಅಧಿಕಾರಿಗಳು ನಿಯಮಿತವಾಗಿ ಹಠಾತ್ ತಪಾಸಣೆ ನಡೆಸುತ್ತಾರೆ. ಮಂಗಳವಾರ ಲಾತೂರ್‌ಗೆ ಆಗಮಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಹಾಗೆಯೇ ದೇವೇಂದ್ರ ಫಡ್ನವೀಸ್ ಅವರ ಬ್ಯಾಗ್‌ಗಳನ್ನು ಅಧಿಕಾರಿಗಳು ಇದೇ ರೀತಿ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ: 5 ಕೋಟಿಗೆ ಮಾಜಿ ಸಿಎಂ ದಿ.ಎಸ್ ನಿಜಲಿಂಗಪ್ಪ ಮನೆ ಖರೀದಿಸಿದ ಸರ್ಕಾರ
Advertisement
ಈ ಬಗ್ಗೆ ದೇವೇಂದ್ರ ಫಡ್ನವಿಸ್ (Devendra Fadnavis) ಮಾತನಾಡಿ, ಬ್ಯಾಗ್‌ಗಳನ್ನು ಪರಿಶೀಲಿಸುವುದರಲ್ಲಿ ಏನು ತಪ್ಪಿದೆ? ನಾವು ಪ್ರಚಾರ ಮಾಡುವ ಸಮಯದಲ್ಲಿ ನಮ್ಮ ಬ್ಯಾಗ್‌ಗಳನ್ನು ಪರಿಶೀಲಿಸಿದ್ದಾರೆ ಅದರಲ್ಲಿ ಏನಿದೆ? ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಇಂತಹ ಕ್ರಮಗಳು ಅತ್ಯಗತ್ಯ. ಇದಕ್ಕೆ ನಾನು ಸಂಪೂರ್ಣವಾಗಿ ಸಹಕರಿಸಿದ್ದೇನೆ. ನಾವೆಲ್ಲರೂ ಕಾನೂನನ್ನು ಗೌರವಿಸೋಣ ಮತ್ತು ನಮ್ಮ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ಬೆಂಬಲಿಸೋಣ ಎಂದರು. ಇದನ್ನೂ ಓದಿ: ಗೃಹಪ್ರವೇಶದ ಸಂಭ್ರಮದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಸೋನು ಗೌಡ