ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟ ಕೊನೆಗೂ ಅಂತ್ಯವಾಗಿದೆ. ಸಿಎಂ ಏಕನಾಥ್ ಶಿಂಧೆ ಬಹುಮತ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಒಟ್ಟು ಬಿಜೆಪಿ ಮತ್ತು ಶಿವಸೇನೆ ಬಣದ ಒಟ್ಟು 164 ಶಾಸಕರು ಶಿಂಧೆ ಪರ ನಿಂತರೇ, 99 ಶಾಸಕರು ವಿರುದ್ಧವಾಗಿ ನಿಂತಿದ್ದಾರೆ. ಈ ಮೂಲಕ ಬಿಜೆಪಿ ಬೆಂಬಲಿತ ಶಿವಸೇನೆ ಬಂಡಾಯ ಸರ್ಕಾರ ಎರಡೂವರೆ ವರ್ಷದ ಬಳಿಕ ಅಧಿಕಾರ ಹಿಡಿದಿದೆ. ಇದನ್ನೂ ಓದಿ: ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ-ಭಾರತ ಗಡಿಯಲ್ಲಿನ ಸೇತುವೆ
ಎರಡು ದಿನಗಳ ಕಾಲ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ, ಭಾನುವಾರದಂದು ಸ್ಪೀಕರ್ ಆಯ್ಕೆ ಮಾಡಲಾಗಿತ್ತು. ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಬಂಡಾಯ ಶಾಸಕರ ನೆರವಿನೊಂದಿಗೆ 164 ಮತಗಳನ್ನು ಗಳಿಸುವ ಮೂಲಕ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಶಿಂಧೆ ಬಹುಮತ ಸಾಬೀತಿಗೆ ಮತಗಳ ಕೊರತೆಯಾಗಲಿಲ್ಲ. ಇದನ್ನೂ ಓದಿ: ಮೆಟ್ಟಿಲಿನಿಂದ ಎಡವಿ ಬಿದ್ದ ಲಾಲೂ ಪ್ರಸಾದ್ ಯಾದವ್ – ಭುಜದ ಮೂಳೆ ಮುರಿತ
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಮತಗಳ ಅವಶ್ಯಕತೆ ಇದ್ದು, ಓರ್ವ ಶಾಸಕನ ನಿಧನದಿಂದ ಇದು 144ಕ್ಕೆ ಇಳಿದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 55, ಎನ್‍ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106, ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ 2, ಎಐಎಂಐಎಂ 2, ಪ್ರಹರ್ ಜನಶಕ್ತಿ 1, ಸಿಪಿಐ (ಎಂ) 1, ಪಿಡಬ್ಲ್ಯೂಪಿ 1, ಸ್ವಾಭಿಮಾನಿ ಪಕ್ಷ 1, ರಾಷ್ಟ್ರೀಯ ಸಮಾಜ ಪಕ್ಷ 1, ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1 ಸ್ಥಾನಗಳನ್ನು ಹೊಂದಿದೆ.
107 ಮತಗಳನ್ನು ಹೊಂದಿರುವ ಮಹಾ ವಿಕಾಸ್ ಅಘಾಡಿ ಮೈತ್ರಿ ವಿರೋಧ ಪಕ್ಷವಾಗಲಿದೆ. ಈ ಮೂಲಕ ಮೂರು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಕ್ಕೆ ಅಧಿಕೃತ ತೆರೆ ಬಿದ್ದಿದೆ.