ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಫೋಟೋ ಮುಂದೆ ‘ಏಕ್ ಲವ್ ಯಾ’ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿ ಸಂಭ್ರಮಮಾಚರಣೆ ಮಾಡಿರುವುದು ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಶಾಂಪೇನ್ ಚಿಮ್ಮಿಸಿದ್ದಾರೆ. ಈ ವೇಳೆ ಅಪ್ಪು ಫೋಟೋ ಎಲ್ ಇಡಿ ಮೇಲೆ ಬಂದಿದೆ. ಈ ಕುರಿತಾಗಿ ಚಿತ್ರತಂಡ ಕ್ಷಮೆ ಕೇಳ ಬೇಕು ಎಂದು ಸಾರಾಗೋವಿಂದ್ ಅವರು ಹೇಳಿದ್ದರು.
ಅಪ್ಪು ಅಗಲಿಕೆ ನೋವಿನಿಂದ ಹೊರ ಬಂದಿಲ್ಲ. ಆದರೆ ಏಕ್ ಲವ್ ಯಾ ಸಿನಿಮಾ ತಂಡ ಅಪ್ಪು ಫೋಟೋ ಮುಂದೇ ಶಾಂಪೇನ್ ಚಿಮ್ಮಿಸಿ ಸಂಭ್ರಮಾಚರಣೆ ಮಾಡಿ ಎಡವಟ್ಟು ಮಾಡಿಕೊಂಡಿದೆ. ಶಾಂಪೇನ್ ಚಿಮ್ಮಿಸುವ ವೇಳೆ ಹಾಡು ಪ್ರಸಾರವಾಗಿದೆ. ಇದರಿಂದ ಅಪ್ಪು ಫೋಟೋಗೆ ಅವಮಾನ ಮಾಡಿದಂತಾಗಿದೆ. ಈ ಕುರಿತಾಗಿ ಎಲ್ಲೆಡೆ ಆಕ್ರೋಶವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!
ಈ ಕುರಿತಾಗಿ ನಿರ್ದೇಶಕ ಪ್ರೇಮ್ ಪಬ್ಲಿಕ್ ಟಿವಿ ಮೂಲಕವಾಗಿ ಕ್ಷಮೆ ಕೇಳಿದ್ದಾರೆ. ನಮಗೆ ಗೊತ್ತಿಲ್ಲದೆ ತಪ್ಪು ಆಗಿದೆ. ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.