– ಮಹಾರಾಷ್ಟ್ರದಲ್ಲಿ ಮಹಾಯುತಿ ಕಮಾಲ್; ಮೋದಿ ವಿಜಯ ಭಾಷಣ
ನವದೆಹಲಿ: ಹರಿಯಾಣದ ಬಳಿಕ ಮಹಾರಾಷ್ಟ್ರ ಜನರು ‘ಏಕ್ ಹೈ ತೋ ಸೇಫ್ ಹೈ’ ಎಂಬ ಸಂದೇಶವನ್ನು ಸಾಬೀತುಪಡಿಸಿದ್ದಾರೆ. ಈಗ ಇದು ದೇಶದ ಮಹಾಮಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣಾ ಫಲಿತಾಂಶ (Maharashtra Assembly Election Results) ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ ನೇತೃತ್ವದ ಮಹಾಯುತಿಯು 2024ರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿದೆ. ಈ ಸಂದರ್ಭದಲ್ಲಿ ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮಹಾರಾಷ್ಟ್ರದ ಜನರು ಮಹಾ ವಿಕಾಸ್ ಅಘಾಡಿಯನ್ನು (MVA) ಸೋಲಿಸುವ ಮೂಲಕ ನಕಾರಾತ್ಮಕ ರಾಜಕೀಯ ಹಾಗೂ ಪರಿವಾರವಾದವನ್ನು ಸೋಲಿಸಿದ್ದಾರೆ. ಇದರೊಂದಿಗೆ ಇಂದು ಮಹಾರಾಷ್ಟ್ರವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಬಲಪಡಿಸಿದೆ. ಇನ್ನು ಮಹಾ ಅಘಾಡಿ ಸೋಲನ್ನು ವಿಕಸಿತ ಭಾರತದ ಗೆಲುವು ಎಂದು ಬಣ್ಣಸಿದರು. ಇದನ್ನೂ ಓದಿ: ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ಪಾಲು – ಫಲಕೊಡದ ಗೌಡರ ತಂತ್ರ, ಕೈಹಿಡಿದ ಮುಸ್ಲಿಂ ಮತ!
ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಮೈತ್ರಿಯು ಕಳೆದ 50 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ತನ್ನ ಅತಿದೊಡ್ಡ ಗೆಲುವನ್ನು ಪಡೆದುಕೊಂಡಿದೆ. ಬಿಜೆಪಿ ನೇತೃತ್ವದ ಮೈತ್ರಿಗೆ ಮಹಾರಾಷ್ಟ್ರ ಸತತ ಮೂರನೇ ಬಾರಿಗೆ ಆಶೀರ್ವಾದ ಮಾಡಿದೆ. ಮೂರನೇ ಬಾರಿಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದಿದೆ ಮತ್ತು ಮಹಾರಾಷ್ಟ್ರವು ಬಿಜೆಪಿಗೆ ಸತತ ಮೂರು ಬಾರಿ ಜನಾದೇಶವನ್ನು ನೀಡಿದ ಆರನೇ ರಾಜ್ಯವಾಗಿದೆ. ಮಹಾರಾಷ್ಟ್ರ ಚುನಾವಣಾ ಗೆಲುವನ್ನು ಸತ್ಯ ಮತ್ತು ಸಾಮಾಜಿಕ ನ್ಯಾಯದ ಗೆಲುವು ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ: ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು