ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ದುರ್ಗಾ ಪೂಜೆಯ (Durga Puja) ಸಂದರ್ಭದಲ್ಲಿ ಕೋಮುಗಲಭೆ ಉಂಟಾಗಬಹುದೆಂಬ ಆತಂಕದ ನಡುವೆ, ಕೆಲವು ದೇವಾಲಯಗಳಿಗೆ (Hindu Temples) ಇಸ್ಲಾಮಿಸ್ಟ್ ಗುಂಪುಗಳಿಂದ ಸುಲಿಗೆ ಬೆದರಿಕೆ ಪತ್ರಗಳು ಬಂದಿವೆ.
ಖುಲ್ನಾ ನಗರದ ಡಕೋಪ್‍ನಲ್ಲಿರುವ 25ಕ್ಕೂ ಹೆಚ್ಚು ದೇವಾಲಯಗಳಿಗೆ ಐದು ದಿನಗಳ ಹಬ್ಬವನ್ನು ಆಚರಿಸಲು 5 ಲಕ್ಷ ರೂ. ಬೆದರಿಕೆ ಹಾಕಲಾಗಿದೆ. ಸುಲಿಗೆ ಬೆದರಿಕೆಗಳ ವಿರುದ್ಧ ದೇವಾಲಯ ಸಮಿತಿಗಳು ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರ ಮೇಲೆ ಯಾವುದೇ ವಿಶ್ವಾಸವಿಲ್ಲ ಎಂದು ಪೂಜಾ ಸಮಿತಿಗಳು ಹೇಳಿಕೊಂಡಿವೆ. ಬೆದರಿಕೆಯ ಕಾರಣ, ಕೆಲವು ಪೂಜಾ ಸಮಿತಿಗಳು ಆಚರಣೆಯನ್ನು ರದ್ದುಗೊಳಿಸಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯಾದಗಿರಿಯಲ್ಲಿ ಗುಡುಗು ಸಹಿತ ಬಾರಿ ಮಳೆ : ಸಿಡಿಲು ಬಡಿದು ನಾಲ್ವರು ಸಾವು
Advertisement
Advertisement
ಅಕ್ಟೋಬರ್ 9 ರಿಂದ 13 ರವರೆಗೆ ದುರ್ಗಾ ಪೂಜೆಯನ್ನು ಆಚರಿಸಲಾಗುತ್ತದೆ. ಕಳೆದ 2023ಕ್ಕೆ ಹೋಲಿಸಿದರೆ ಬಾಂಗ್ಲಾದೇಶದಲ್ಲಿ ಈ ವರ್ಷ ಹೆಚ್ಚಿನ ಪೂಜಾ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿತ್ತು.
Advertisement
Advertisement
ಈ ಹಿಂದೆ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ದುರ್ಗಾ ಪೂಜೆ-ಸಂಬಂಧಿತ ಚಟುವಟಿಕೆಗಳನ್ನು ಆಜಾನ್‍ಗೆ ಐದು ನಿಮಿಷಗಳ ಮೊದಲು ಮತ್ತು ನಮಾಜ್ ಸಮಯದಲ್ಲಿ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ನೋಟಿಸ್