ಲಕ್ನೋ: ಕೋತಿಗಳ ಗುಂಪಿನೊಂದಿಗೆ ಬದುಕುತ್ತಿದ್ದ 8 ವರ್ಷದ ಬಲಕಿಯನ್ನು ಉತ್ತರಪ್ರದೇಶದ ಪೊಲೀಸರು ರಕ್ಷಿಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎರಡು ತಿಂಗಳ ಹಿಂದೆ ಕತಾರ್ನಿಯಾ ವನ್ಯಜೀವ ಅಭಯಾರಣ್ಯ ವ್ಯಾಪ್ತಿಯ ಮೋತಿಪುರ್ ಪ್ರದೇಶದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಯದವ್ ಎಂದಿನಂತೆ ಗಸ್ತು ತಿರುಗುತ್ತಿದ್ರು. ಈ ವೇಳೆ ಈ ಬಾಲಕಿಯನ್ನು ನೋಡಿದ್ದಾರೆ. ಕೋತಿಗಳ ಜೊತೆ ಆರಾಮಾಗಿದ್ದ ಈ ಬಾಲಕಿಯನ್ನು ಯಾದವ್ ರಕ್ಷಿಸಲು ಯತ್ನಿಸಿದ್ದಾರೆ. ಆಗ ವಾನರ ಪಡೆ ಚೀರಾಡಲು ಶುರು ಮಾಡಿವೆ. ಅಲ್ಲದೆ ಆ ಬಾಲಕಿಯೂ ಕೂಡ ಚೀರಾಡಿದ್ದಾಳೆ. ಆದರೂ ಹೇಗೋ ಕಷ್ಟಪಟ್ಟು ಪೊಲೀಸರು ಬಾಲಕಿಯನ್ನ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಬಾಲಕಿಗೆ ಮಾತನಾಡಲು ಬರಲ್ಲ. ಹಾಗೆ ಯಾವುದೇ ಭಾಷೆ ಆಕೆಗೆ ಅರ್ಥವಾಗ್ತಿಲ್ಲ. ಮನುಷ್ಯರನ್ನ ನೋಡಿದ್ರೆ ಭಯಪಡ್ತಾಳೆ. ಜೊತೆಗೆ ಕೆಲವೊಮ್ಮೆ ವೈಲೆಂಟ್ ಆಗ್ತಾಳೆ ಅಂತ ಬಾಲಕಿಗೆ ಚಿಕಿತ್ಸೆ ನೀಡ್ತಿರೋ ವೈದ್ಯರು ಹೇಳಿದ್ದಾರೆ.
ಚಿಕಿತ್ಸೆ ಬಳಿಕ ಬಾಲಕಿ ಸ್ವಲ್ಪ ಚೇತರಿಸಿಕೊಂಡಿದ್ದಾಳೆ. ಆದರೂ ಆಕೆಯ ಚೇತರಿಕೆ ತುಂಬಾ ನಿಧಾನಗತಿಯಲ್ಲಿದೆ. ಆಕೆ ಪ್ರಾಣಿಗಳಂತೆ ನೇರವಾಗಿ ಬಾಯಿಯಿಂದ ಊಟ ಮಾಡ್ತಿದ್ದಾಳೆ. ಆಕೆಯ ಚರ್ಮದ ಮೇಲೆ ಗುರುತುಗಳಿವೆ. ತುಂಬಾ ಸಮಯದಿಂದ ಆಕೆ ಕೋತಿಗಳ ಜೊತೆಯೇ ಜೀವಿಸಿರಬೇಕು. ಕೈಗಳು ಹಾಗೂ ಕಾಲುಗಳೆರಡನ್ನೂ ಬಳಸಿ ಪ್ರಾಣಿಗಳಂತೆಯೇ ನಡೆದಾಡುತ್ತಿದ್ದಳು. ಈಗ ಕೇವಲ ಎರಡು ಕಾಲಿನ ಮೇಲೆ ನಡೆದಾಡಲು ಆಕೆಗೆ ತರಬೇತಿ ನೀಡಲಾಗ್ತಿದೆ. ಆದ್ರೂ ಒಮ್ಮೊಮ್ಮೆ ಪ್ರಾಣಿಗಳಂತೆ ನಡೆಯುತ್ತಾಳೆ ಅಂತ ವೈದ್ಯರು ಹೇಳಿದ್ದಾರೆ.
Girl found in Katarniaghat forests of Uttar Pradesh's Bahraich two months back with habits similar to that of animals. pic.twitter.com/7lQlDYjF6V
— ANI UP (@ANINewsUP) April 6, 2017