ಮೈಸೂರು: ಕೆಎಸ್‍ಆರ್ ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭಸಿದ ಪರಿಣಾಮ 8 ಮಂದಿಗೆ ಗಾಯವಾಗಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣೆ ಬಳಿ ಈ ಅಪಘಾತ ಸಂಭವಿಸಿದೆ. ಟಿಪ್ಪರ್ ಲಾರಿ ಜಲ್ಲಿ ತುಂಬಿಕೊಂಡು ಮೈಸೂರಿನಿಂದ ಹುಣಸೂರಿನತ್ತ ಹೊರಟಿತ್ತು. ಇತ್ತ ಕೆಎಸ್‍ಆರ್ ಟಿಸಿ ಬಸ್ ಮೈಸೂರಿನ ಕಡೆಗೆ ಬರುತ್ತಿತ್ತು.
ಈ ವೇಳೆ ಬಿಳಿಕೆರೆ ಪೊಲೀಸ್ ಠಾಣೆ ಬಳಿ ಕೆಎಸ್‍ಆರ್ ಟಿಸಿ ಬಸ್ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಬಸ್ಸಿನಲ್ಲಿದ್ದ 8 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಗಾಯಾಳುಗಳನ್ನು ಮೈಸೂರು ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಪಘಾತದ ರಭಸಕ್ಕೆ ಟಿಪ್ಪರ್ ಲಾರಿ ಪಲ್ಟಿಯಾಗಿದ್ದು, ಇತ್ತ ಕೆಎಸ್‍ಆರ್ ಟಿಸಿ ಬಸ್ ಸಮೀಪದ ಗದ್ದೆಯೊಳಗೆ ನುಗ್ಗಿದೆ. ಅಪಘಾತದ ಮಾಹಿತಿ ತಿಳಿದು ಬಿಳಿಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv