ರಾಂಚಿ: ಪ್ರವಾಸಕ್ಕೆಂದು ದೋಣಿಯಲ್ಲಿ ತೆರಳಿದ್ದ ಒಂದೇ ಕುಟುಂಬದ 8 ಸದಸ್ಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
ಜಾರ್ಖಂಡ್‌ನ ಕೊಡೆರ್ಮಾ ಜಿಲ್ಲೆಯ ಪಂಚಖೆರೋ ಅಣೆಕಟ್ಟಿನಲ್ಲಿ ಭಾನುವಾರ ದೋಣಿ ಮುಳುಗಿದ್ದು, ಒಂದೇ ಕುಟುಂಬದ 8 ಜನರು ಸಾವನ್ನಪ್ಪಿದ್ದಾರೆ. ದೋಣಿಯನ್ನು ಬಾಡಿಗೆ ಪಡೆದು ವಿಹಾರಕ್ಕೆ ತೆರಳಿದ್ದ ಕುಟುಂಬ ದುರಂತ ಅಂತ್ಯ ಕಂಡಿದೆ. ಇದನ್ನೂ ಓದಿ: ಕುಡಿದು ವಾಹನ ಚಲಾಯಿಸಿದ್ರೆ ರಕ್ತದಾನ ಮಾಡುವ ಶಿಕ್ಷೆ
- Advertisement -
कोडरमा के मरकच्चो प्रखंड स्थित पंचखेरो डैम में नाव दुर्घटना में 8 लोगों के लापता होने की चिंताजनक खबर मिली।
ईश्वर से सभी के सकुशल लौटने की कामना करता हूं। pic.twitter.com/ECXZ383wel
— Raghubar Das (@dasraghubar) July 17, 2022
- Advertisement -
ದೋಣಿಯಲ್ಲಿ ತೆರಳಿದ್ದ 9 ಜನರ ಪೈಕಿ ಕೇವಲ ಒಬ್ಬರು ಮಾತ್ರವೇ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. ಶಿವಂ ಸಿಂಗ್(17), ಪಾಲಕ್ ಕುಮಾರಿ(14), ಸೀತಾರಾಮ್ ಯಾದವ್(40), ಸೇಜಲ್ ಕುಮಾರಿ(16), ಹರ್ಷಲ್ ಕುಮಾರ್(8), ಭಾವಾ(5), ರಾಹುಲ್ ಕುಮಾರ್(16) ಹಾಗೂ ಅಮಿತ್ ಕುಮಾರ್(14) ಸಾವನ್ನಪ್ಪಿದ್ದು, ಪ್ರದೀಪ್ ಕುಮಾರ್ ಈಜಿ ದಡ ಸೇರಿದ್ದಾರೆ. ಇದನ್ನೂ ಓದಿ: ಸ್ಪೈಸ್‌ಜೆಟ್ ವಿಮಾನ ಹಾರಾಟ ನಿಲ್ಲಿಸಿ – ದೆಹಲಿ ಹೈಕೋರ್ಟ್‌ನಲ್ಲಿ ಮನವಿ
- Advertisement -
ಈಜಿ ದಡ ಸೇರಿದ ಪ್ರದೀಪ್ ಘಟನೆ ಬಗ್ಗೆ ಸ್ಥಳೀಯರಲ್ಲಿ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಹಾಗೂ ಶೋಧ ಕಾರ್ಯ ನಡೆಸಿದೆ. ಘಟನೆ ಬಗ್ಗೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಸಂತಾಪ ವ್ಯಕ್ತಪಡಿಸಿದ್ದಾರೆ.