ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯ ಬಹುದಿನಗಳ ಕನಸು ಇಂದು ನನಸಾಗಿದ್ದು, ಇಂದಿನಿಂದ ಸಬರ್ಬನ್ ರೈಲುಗಳು ಸಂಚಾರ ಆರಂಭಿಸಿವೆ.
ನಗರದಲ್ಲಿ 8 ಸಬರ್ಬನ್ ರೈಲುಗಳ ಓಡಾಟ ಆರಂಭಿಸಿದ್ದು, ಐಟಿ, ಬಿಟಿ ಉದ್ಯೋಗಿಗಳಿಗೆ ಈಗ ಸುಗಮ ಸಂಚಾರದ ವ್ಯವಸ್ಥೆಯಾಗಿದೆ. ನಗರದ ಜನರ ಸೇವೆಗಿಳಿದ 8 ಸಬರ್ಬನ್ ಟ್ರೈನ್ ಪ್ರಾರಂಭವಾಗಿವೆ. ನಾಲ್ಕು ವಿದ್ಯುತ್ ಚಾಲಿತ (ಮೆಮು) ರೈಲುಗಳು, ನಾಲ್ಕು ಡೀಸೆಲ್ ಚಾಲಿತ (ಡೆಮು) ರೈಲುಗಳ ಸಂಚಾರ ಆರಂಭವಾಗಿದೆ.
Advertisement
ಬೈಯಪ್ಪನಹಳ್ಳಿ – ವೈಟ್ ಫೀಲ್ಡ್ ಮತ್ತು ವೈಟ್ ಫೀಲ್ಡ್ – ಬೈಯಪ್ಪನಹಳ್ಳಿ ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲುಗಳು ಸಂಚರಿಸಿದರೆ, ಬಾಣಸವಾಡಿ – ಹೊಸೂರು ಮಾರ್ಗದಲ್ಲಿ ಡೀಸೆಲ್ ಚಾಲಿತ ರೈಲುಗಳ ಹಳಿ ಮೇಲೆ ಓಡಲಿದೆ.
Advertisement
Advertisement
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ವೈಟ್ ಫೀಲ್ಡ್ ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಭಾನುವಾರ ಹೊರತುಪಡಿಸಿ ಉಳಿದ 6 ದಿನಗಳವರೆಗೂ ಸಬರ್ಬನ್ ರೈಲು ಸಂಚಾರ ಮಾಡುತ್ತವೆ. ಈ ರೈಲಿನಲ್ಲಿ ಒಮ್ಮೆಗೆ 2,400 ಮಂದಿ ಪ್ರಯಾಣಿಕರು ಸಂಚರಿಸಬಹುದು. ಈಗಾಗಲೇ 110 ಉಪನಗರ ರೈಲು ಗಳು ನಗರದಲ್ಲಿ ಸಂಚರಿಸುತ್ತಿವೆ. ಇದರ ಜತೆಗೆ ಈಗ 8 ಹೆಚ್ಚುವರಿ ರೈಲುಗಳು ಸೇರ್ಪಡೆಯಾಗಿವೆ.
Advertisement
ಮೆಮು ರೈಲು ವೇಳಾಪಟ್ಟಿ
* ಬೈಯಪ್ಪನಹಳ್ಳಿಯಿಂದ ಸಂಜೆ 4.45 ಕ್ಕೆ ನಿರ್ಗಮಿಸಿ ವೈಟ್‍ಫಿಲ್ಡ್ ಗೆ 5.05 ಕ್ಕೆ ತಲುಪುತ್ತದೆ.
* ವೈಟ್‍ಫಿಲ್ಡ್ ನಿಂದ ಬೆಳಿಗ್ಗೆ 9 ಗಂಟೆಗೆ ನಿರ್ಗಮಿಸಿ ಬೈಯಪ್ಪನಹಳ್ಳಿಗೆ 9.20ಕ್ಕೆ ಹೋಗುತ್ತದೆ.
* ಮತ್ತೆ ಬೈಯಪ್ಪನಹಳ್ಳಿಯಿಂದ ಸಂಜೆ 6.45 ಕ್ಕೆ ನಿರ್ಗಮಿಸಿ ಸಂಜೆ 7.15 ಕ್ಕೆ ಕೆಎಸ್‍ಆರ್‍ಗೆ ತಲುಪುತ್ತದೆ.
* ಕೆಎಸ್‍ಆರ್ ನಿಂದ ಬೆಳಿಗ್ಗೆ 7.50ಕ್ಕೆ ಹೊರಟು ಬೈಯಪ್ಪನಹಳ್ಳಿಗೆ 8.15 ಕ್ಕೆ ತಲುಪುತ್ತದೆ.
ಡೆಮು ರೈಲು ವೇಳಾಪಟ್ಟಿ
* ಬಾಣಸವಾಡಿಯಿಂದ ಬೆಳಿಗ್ಗೆ9.50ಕ್ಕೆ ನಿರ್ಗಮಿಸಿ ಹೊಸೂರಿಗೆ 11 ಗಂಟೆ ತಲುಪುತ್ತದೆ.
* ಹೊಸೂರಿನಿಂದ ಮಧ್ಯಾಹ್ನ 11.15 ಕ್ಕೆ ಹೊರಟು 12.25 ಕ್ಕೆ ಬಾಣಸವಾಡಿಗೆ ತಲುಪುತ್ತದೆ.
* ಬಾಣಸವಾಡಿಯಿಂದ ಮಧ್ಯಾಹ್ನ 12.40 ಕ್ಕೆ ನಿರ್ಗಮಿಸಿ 1.45 ಕ್ಕೆ ಹೊಸೂರಿಗೆ ತಲುಪುತ್ತದೆ.
* ಹೊಸೂರಿನಿಂದ ಸಂಜೆ 3.20ಕ್ಕೆ ಹೊರಟು 4.40 ಕ್ಕೆ ಬಾಣಸವಾಡಿಗೆ ತಲುಪುತ್ತದೆ.