ಕೊರೋನಾ ಹಾವಳಿ ಕಡಿಮೆ ಆಗುತ್ತಿರುವ ಮತ್ತು ದೊಡ್ಡ ದೊಡ್ಡ ಸಿನಿಮಾಗಳು ಈಗಾಗಲೇ ರಿಲೀಸ್ ಆಗಿರುವುದರಿಂದ ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಸಾಲುಗಟ್ಟಿ ನಿಂತಿದ್ದಾರೆ ನಿರ್ಮಾಪಕರು. ಪರಿಣಾಮ ವಾರಕ್ಕೆ ಕನಿಷ್ಟ ಐದಾರು ಚಿತ್ರಗಳು ರಿಲೀಸ್ ಆಗುತ್ತಿವೆ. ಈ ವಾರ ಆರು ಕನ್ನಡ ಸಿನಿಮಾಗಳು ಮತ್ತು ಎರಡು ಕನ್ನಡಕ್ಕೆ ಡಬ್ ಆದ ಚಿತ್ರಗಳು ತೆರೆಗೆ ಬರುತ್ತಿವೆ. ಈ ಸಿನಿಮಾಗಳಲ್ಲಿ ಕೆಲವು ಭರವಸೆ ಮೂಡಿಸಿದ ಚಿತ್ರಗಳು ಇವೆ ಎನ್ನುವುದು ವಿಶೇಷ.
Advertisement
ನೀನಾಸಂ ಸತೀಶ್ ನಟನೆಯ ಪೆಟ್ರೋಮ್ಯಾಕ್ಸ್, ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದ ‘ಓ ಮೈ ಲವ್’, ವಿಕ್ರಮ್ ಆರ್ಯ ನಟನೆಯ ಪದ್ಮಾವತಿ, ಅನೀಶ್ ಮುಖ್ಯಭೂಮಿಯ ಬೆಂಕಿ, ಹೊಸಬರ ಚೇಸ್, ಕರ್ಮಣ್ಯೆವಾಧಿಕಾರಸ್ತೆ ಹಾಗೂ ತೆಲುಗು ಮತ್ತು ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ ಗಾರ್ಗಿ ಹಾಗೂ ಹುಡುಗಿ ಸಿನಿಮಾಗಳು ಕೂಡ ಶುಕ್ರವಾರ ಬಿಡುಗಡೆ ಆಗುತ್ತಿದೆ. ತಮ್ಮದೇ ಆದ ಕಾರಣಗಳಿಂದಾಗಿ ಇವುಗಳಲ್ಲಿ ಕೆಲವು ಚಿತ್ರಗಳು ನಿರೀಕ್ಷೆ ಮೂಡಿಸಿವೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್
Advertisement
Advertisement
ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದಿರುವ ಓ ಮೈ ಲವ್ ಸಿನಿಮಾದ ಮೂಲಕ ಹಿರಿಯ ನಟ ಶಶಿಕುಮಾರ್ ಪುತ್ರ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಸ್ಮೈಲ್ ಶ್ರೀನು ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ್ದಾರೆ. ಮಿಥುನ್ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದ ಪದ್ಮಾವತಿ ಸಿನಿಮಾ ಕೂಡ ತನ್ನದೇ ಆದ ಕಾರಣಗಳಿಂದಾಗಿ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕ ಪ್ರತಿಭೆ ವಿಕ್ರಮ್ ಆರ್ಯ ನಟಿಸಿದ್ದು, ಇವರ ಚೊಚ್ಚಲು ಸಿನಿಮಾದ ಮೂಲಕ ಈ ಹಿಂದೆ ಭರವಸೆ ಮೂಡಿಸಿದ್ದರು.
Advertisement
ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ಸತೀಶ್ ಜೊತೆ ಹರಿಪ್ರಿಯಾ, ಕಾರುಣ್ಯ ರಾಮ್ ಸೇರಿದಂತೆ ಹಲವು ಅನುಭವಿ ಕಲಾವಿದರೆ ಇದ್ದಾರೆ. ಅಲ್ಲದೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಡಕಿ ಸಿನಿಮಾ ಕನ್ನಡದಲ್ಲಿ ಹುಡುಗಿಯಾಗಿದೆ. ಸಾಯಿ ಪಲ್ಲವಿ ಅವರ ನಿರೀಕ್ಷೆ ಸಿನಿಮಾ ಗಾರ್ಗಿ ಕೂಡ ರಿಲೀಸ್ ಆಗುತ್ತಿದೆ. ಎಂಟು ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿರುವುದರಿಂದ ಒಂದು ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರೇಕ್ಷಕ ಯಾವ ಸಿನಿಮಾ ನೋಡುತ್ತಾನೆ ಎನ್ನುವುದೇ ಕುತೂಹಲಕ್ಕೆ ಕಾರಣವೂ ಆಗಿದೆ.