ಆನೇಕಲ್: ಮಗುವೊಂದನ್ನು ದತ್ತು ಪಡೆದಿದ್ದವರು ನಿಧಿಗಾಗಿ (Treasure) ಬಲಿಗೆ ತಯಾರಿ ಮಾಡಿಕೊಂಡು ಪೂಜೆ ನಡೆಸಿದ ಆರೋಪ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ಕೇಳಿಬಂದಿದೆ.
ಸೈಯದ್ ಇಮ್ರಾನ್ ಎಂಬವವರ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ಮಾಡ್ತಿದ್ದ ಆರೋಪ ಕೇಳಿಬಂದಿದೆ. ಇವರು ಎಂಟು ತಿಂಗಳ ಹಿಂದೆ ಬೇರೆಯವರಿಂದ ಗಂಡು ಮಗುವನ್ನ ಖರೀದಿಸಿದ್ದರು ಎಂದು ಆರೋಪಿಸಲಾಗಿದೆ. ಬಲಿ ಬಗ್ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದ ಹಿನ್ನೆಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ | ಪ್ರತ್ಯೇಕ ಪ್ರಕರಣ – ಇಬ್ಬರು ಬಾಲಕಿಯರ ಮೇಲೆ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ – 7 ಮಂದಿ ವಶಕ್ಕೆ
ಜ.3ರಂದು ಹುಣ್ಣಿಮೆ ಹಿನ್ನೆಲೆ ಮಗು ಬಲಿ ಕೊಡ್ತಿದ್ದಾರೆ ಅಂತ ಮಕ್ಕಳ ಸಹಾಯವಾಣಿಗೆ ಅಪರಿಚಿತರು ಕರೆ ಮಾಡಿದ್ದರು. ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಮನೆಯ ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಎಂಟು ತಿಂಗಳ ಗಂಡು ಮಗುವನ್ನು ವಶಕ್ಕೆ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಶಿಶು ಕೇಂದ್ರಕ್ಕೆ ರವಾನಿಸಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಹತ್ಯೆ ಬಳಿಕ 3 ಅಂತಸ್ತಿನ ಛಾವಣಿಯಿಂದ ಮೃತದೇಹ ಎಸೆದ ಕಿರಾತಕರು

