ಜೈಪುರ: ಬಕ್ರೀದ್ ಹಿನ್ನೆಲೆಯಲ್ಲಿ ಗುಜರಾತ್‍ನ ಇಂಡೋ- ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ಯೋಧರು ಹಾಗೂ ಪಾಕಿಸ್ತಾನದ ಸೈನಿಕರು ಪರಸ್ಪರ ಶುಭ ಕೋರಿ ಸಿಹಿ ವಿನಿಮಯ ಮಾಡಿಕೊಂಡರು.
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಗುಜರಾತ್ ಗಡಿ ಭದ್ರತಾ ಪಡೆಗಳು ಪಾಕಿಸ್ತಾನದ ಸೈನಿಕರೊಂದಿಗೆ ಪರಸ್ಪರ ಶುಭ ಕೋರಿದರು. ಈ ಬಗ್ಗೆ ಬಿಎಸ್‌ಎಫ್ ಯೋಧರು ಟ್ವೀಟ್ ಮಾಡಿದ್ದಾರೆ. ಈ ಹಬ್ಬವು ವಾರ್ಷಿಕ ಹಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು
Advertisement
BSF Gujarat Frontier exchanged sweets and greetings with Pakistan Rangers on Indo-Pakistan International borders of Gujarat state and Barmer district of Rajasthan, on #EidAlAdha pic.twitter.com/dW5ZG9tVSb
— ANI (@ANI) July 10, 2022
ದೇಶಾದ್ಯಂತ ಇಂದು ಮುಸ್ಲಿಮರು ಒಬ್ಬರಿಗೊಬ್ಬರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಕೋರಿದರು. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಶುಭ್ರ ಬಿಳಿ ಬಟ್ಟೆ ತೊಟ್ಟು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಇನ್ನು ದೇಶದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಮೋದಿ ಸೋಲಿಸಲು ಕಾಂಗ್ರೆಸ್‌ನವರು ಪಾಕಿಸ್ತಾನದ ಬೆಂಬಲ ಕೇಳಿದ್ರು – ಪ್ರಹ್ಲಾದ್ ಜೋಶಿ