ಹಾಸನ: ಈದ್ ಮಿಲಾದ್ ಹಬ್ಬ (Eid Milad) ಹಿನ್ನೆಲೆಯಲ್ಲಿ ಹಾಸನ (Hassana) ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಮ್ ಬಾಂಧವರು ಬೃಹತ್ ಮೆರವಣಿಗೆ ನಡೆಸಿದರು ಈ ವೇಳೆ ಟಿಪ್ಪು ಸುಲ್ತಾನ್ (Tipu Sultan) ಪರ ಘೋಷಣೆ ಕೇಳಿ ಬಂದವು.
ನಗರದ ಮಟನ್ ಮಾರ್ಕೆಟ್ ರಸ್ತೆಯಿಂದ ಹೊರಟ ಮೆರವಣಿಗೆ ಸಂತೇಪೇಟೆ, ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆ ರಸ್ತೆ, ಪೆನ್‍ಷನ್‍ಮೊಹಲ್ಲಾ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಪರ ಮುಸ್ಲಿಮರು ಘೋಷಣೆ ಕೂಗಿದರು. ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ಬೃಹತ್ ಫ್ಲೆಕ್ಸ್ ಹಿಡಿದು ಸುಲ್ತಾನ್, ಸುಲ್ತಾನ್ ದೇಕೋ, ದೇಕೋ ಎಂದು ಘೋಷಣೆ ಮೊಳಗಿಸಿದರು. ಇದನ್ನೂ ಓದಿ: 3 KG ಚಿನ್ನವನ್ನು ಒಳ ಉಡುಪಿನಲ್ಲಿಟ್ಟು ಸಾಗಿಸ್ತಿದ್ದ ಮಹಿಳೆಯರು ಅರೆಸ್ಟ್
ಮೆರವಣಿಗೆಯಲ್ಲಿ ರಾಷ್ಟ್ರೀಯ ಧ್ವಜ ಸೇರಿದಂತೆ ವಿವಿಧ ಬಗೆಯ ಬಾವುಟಗಳನ್ನು ಹಿಡಿದು ಸಾವಿರಾರು ಮಂದಿ ಮುಸ್ಲಿಮರು ಸಾಗಿದರು. ಮೆರವಣಿಗೆ ಉದ್ದಕ್ಕೂ ಕಾಂಗ್ರೆಸ್ (Congress) ಮುಖಂಡ ಬಾಗೂರು ಮಂಜೇಗೌಡ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಿಹಿತಿಂಡಿ ಹಾಗೂ ವಾಟರ್ ಬಾಟಲ್ ವಿತರಿಸಿದರು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಖಾಕಿ ಸರ್ಪಗಾವಲು ಹಾಕಿದ್ದರು. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು