– ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಇಂದು ಗಣೇಶ ವಿಸರ್ಜನೆಗೆ ಬ್ರೇಕ್
ಮಂಡ್ಯ: ನಾಗಮಂಗಲ ಕೋಮುಗಲಭೆ (Nagamangala Riots) ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸೋಮವಾರ (ಇಂದು) ನಾಗಮಂಗಲದಲ್ಲಿ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಪೊಲೀಸ್ ಸರ್ಪಗಾವಲು ರಚಿಸಲಾಗಿದೆ.
Advertisement
ನಾಗಮಂಗಲದಲ್ಲಿ ಮತ್ತೆ ಕೋಮು ಘರ್ಷಣೆಗೆ ಅವಕಾಶ ಮಾಡಿಕೊಡದಂತೆ ಪೊಲೀಸರಿಗೆ ಸರ್ಕಾರ (Karnataka Government) ಖಡಕ್ ಸೂಚನೆ ನೀಡಿದೆ. ಭಾನುವಾರದಿಂದಲೇ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ನಾಗಮಂಗಲದಲ್ಲೇ ಮೊಕ್ಕಾಂ ಹೂಡಿದ್ದಾರೆ. ಭದ್ರತೆ ಹಾಗೂ ಪರಿಸ್ಥಿತಿ ನಿಯಂತ್ರಣದ ಬಗ್ಗೆ ಗೃಹ ಇಲಾಖೆಗೆ ಗಂಟೆ ಗಂಟೆಗೂ ಮಾಹಿತಿ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದರ್ಶನ್‍ಗೆ ಟೀ, ಸಿಗರೇಟ್ ಕೊಟ್ಟಿದ್ಯಾರು? – ರಾಜಾತಿಥ್ಯ ಕೇಸ್ ಚಾರ್ಜ್‍ಶೀಟ್‍ಗೆ ಸಿದ್ಧತೆ
Advertisement
Advertisement
ಪೊಲೀಸ್ ಸರ್ಪಗಾವಲು ಹೇಗಿದೆ?
ಈದ್ ಮಿಲಾದ್ (Eid Milad) ಮೆರವಣಿಗೆ ಹಿನ್ನೆಲೆ ನಾಗಮಂಗಲದ ಗಲ್ಲಿಗಲ್ಲಿಗಳಲ್ಲೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೊನ್ನೆ ಗಲಭೆಗೆ ಕಾರಣವಾದ ದರ್ಗಾ, ಮಸೀದಿ ಬಳಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಮಂಡ್ಯ ಸರ್ಕಲ್, ಈದ್ಗಾ ಮೈದಾನದ ಸುತ್ತಲೂ ಭಾರೀ ಬಂದೋ ಬಸ್ತ್ ಇದೆ. ಇದನ್ನೂ ಓದಿ: ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ – ಆತಂಕ ಹೆಚ್ಚಿಸಿದ ಆ ಒಂದು ರೈಫಲ್, ದಾಳಿಕೋರ ಸಿಕ್ಕಿದ್ದು ಹೇಗೆ?
Advertisement
2 ಎಸ್ಪಿ, 2 ಎಎಸ್ಪಿ, 4 ಡಿವೈಎಸ್ಪಿ, 20ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್, 20ಕ್ಕೂ ಹೆಚ್ಚು ಪಿಎಸ್‌ಐ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ತಲಾ 7 ಡಿಎಆರ್, ಕೆಎಸ್‌ಆರ್‌ಪಿ ಸೇರಿದಂತೆ 700ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಮತ್ತೊಂದೆಡೆ ಇಂದು ಗಣೇಶ ವಿಸರ್ಜನೆಗೆ ಬ್ರೇಕ್ ಹಾಕಲಾಗಿದೆ. ಗಣಪತಿ ವಿಸರ್ಜನೆ, ಮೆರವಣಿಗೆಗೆ ಅನುಮತಿ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ – ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಭರ್ಜರಿ ಸಿದ್ಧತೆ!