ಈದ್ ಮಿಲಾದ್ ಆಚರಣೆಯ ವಿಶೇಷತೆ ಇಲ್ಲಿದೆ

Public TV
2 Min Read
Eid Milad

ಮುಸ್ಲಿಂ ಸಮುದಾಯದ ಜನರಿಗೆ ಈದ್ ಉಪ್ ಫಿತ್ರ ಮತ್ತು ಈದ್ ಉಲ್ ಅಧಾ ಬಳಿಕ ಪ್ರಮಖವಾದ ಮತ್ತೊಂದು ದಿನ ಈದ್ ಮಿಲಾದ್. ಇದನ್ನೂ ಮಿಲಾದುನ್ನಬೀ ಎಂದು ಸಹ ಕರೆಯಲಾಗುತ್ತದೆ. ಈ ದಿನವನ್ನು ಪ್ರವಾದಿ ಮೊಹಮ್ಮದರ ಜನ್ಮ ದಿನ ಆಚರಣೆ ಮಾಡಲಾಗುತ್ತಿದೆ. ಇದನ್ನು ಕೆಲವರು ಜನ್ಮ ದಿನವಾಗಿ ಸಂತೋಷ ಸಂಭ್ರಮದಿಂದ ಆಚರಣೆ ಮಾಡಿದ್ರೆ, ಕೆಲವರು ಪ್ರವಚನ, ದಾನ ಧರ್ಮ, ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ.

ಈ ದಿನವನ್ನು ಇಸ್ಲಾಮಿಕ್ ತಿಂಗಳಾದ ರಬಿ ಉಲ್ ಅವ್ವಲ್ ನಲ್ಲಿ ಬರುವ ತಿಂಗಳಲ್ಲಿ ಸುನ್ನಿಗಳು ಮತ್ತು ಶಿಯಾಗಳು ಬೇರೆ ಬೇರೆ ದಿನಗಳಂದು ಆಚರಣೆ ಮಾಡುತ್ತಾರೆ. ಶಿಯಾ ಮುಸ್ಲಿಂರುವ ರಬಿ ಉಲ್ ಅವ್ವಲ್ ತಿಂಗಳ 17ರಂದು ಮತ್ತು ಸುನ್ನಿಗಳು 12 ದಿನಾಂಕದಂದು ಆಚರಣೆ ಮಾಡುತ್ತಾರೆ.

Eid Milad a

ರಬಿ ಉಲ್ ಅವ್ವಲ್ ತಿಂಗಳ ಆರಂಭದಿಂದ ತಿಂಗಳ ಕೊನೆಯವರೆಗೂ ಒಂದು ತಿಂಗಳ ಕಾಲ ವಿಶ್ವದಾದ್ಯಂತ ಈದ್ ಮಿಲಾದ್ ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ಈದ್ ಮಿಲಾದ್ ಆಚರಣೆಯನ್ನು ಎಲ್ಲಾ ಪಂಗಡದ ಮುಸಲ್ಮಾನರು ಆಚರಿಸುತ್ತಾರೆ. ಈದ್ ಮಿಲಾದ್ ದಿನದಂದು ವಿವಿಧ ಸಾಂಸ್ಕೃತಿಕ, ಪ್ರತಿಭಾ ಕಾರ್ಯಕ್ರಮಗಳನ್ನು ನಡೆಸುವುದು. ಮೌಲೀದ್ ಪಾರಾಯಣ ಮಾಡುವುದು, ಅನ್ನಸಂತರ್ಪಣೆ ಮಾಡುವುದು, ಮೆರವಣಿಗೆ ಮಾಡುವುದು ಈದ್ ಮಿಲಾದ್ ಆಚರಣೆಯ ಒಂದು ಭಾಗವಾಗಿದೆ. ಈದ್ ಮಿಲಾದ್ ಆಚರಣೆಯ ರಬಿ ಉಲ್ ಅವ್ವಲ್ ತಿಂಗಳಲ್ಲಿ ಮುಸಲ್ಮಾನರ ಎಲ್ಲಾ ಧಾರ್ಮಿಕ ಕೇಂದ್ರಗಳು ಮತ್ತು ವಿದ್ಯಾ ಸಂಸ್ಥೆಗಳನ್ನು ಬಣ್ಣದ ದೀಪಗಳು, ಮತ್ತು ಕಾಗದಗಳಿಂದ ಅಲಂಕರಿಸಲಾಗುತ್ತದೆ.

ಈದ್ ಮಿಲಾದ್ ಆಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಮೆರವಣಿಗೆಯೂ ಒಂದು. ರಬಿ ಉಲ್ ಅವ್ವಲ್ ತಿಂಗಳ ಹನ್ನೆರಡನೆಯ ದಿನ ಅಂದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್ ಜನಿಸಿದ ದಿನದಂದು ಜಗತ್ತಿನ ಎಲ್ಲಾ ಕಡೆಗಳಲ್ಲೂ ಆಯ ಪ್ರದೇಶದ ಸಮಯಕ್ಕೆ ಹೊಂದಿಕೊಂಡು ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಪ್ರವಾದಿಯ ಮುಹಮ್ಮದರ ಜನ್ಮ ದಿನದ ಖುಷಿಗಾಗಿ ಮೆರವಣಿಗೆಯನ್ನು ಆಯೋಜಿಸಲಾಗುತ್ತದೆ. ಮೆರವಣಿಗೆಯಲ್ಲಿ ವಿವಿಧ ಇಸ್ಲಾಮಿಕ್ ಕಲಾ ತಂಡಗಳು ಭಾಗವಹಿಸುತ್ತವೆ. ವಾಹನ ಮೆರವಣಿಗೆ, ಕಾಲ್ನಡಿಗೆ ಜಾಥಾ ಇವುಗಳಲ್ಲಿ ಪ್ರಮುಖವಾದವು. ಈದ್ ಮಿಲಾದ್ ಮೆರವಣಿಗೆಯ ದಾರಿಯುದ್ದಕ್ಕೂ ಸಿಹಿ ತಿಂಡಿಗಳನ್ನು ವಿತರಿಸಿವುದು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈದ್ ಮಿಲಾದ್ ಮೆರವಣಿಗೆಯಲ್ಲಿ ಕೇವಲ ಮುಸಲ್ಮಾನರಲ್ಲದೆ ಇತರ ಧರ್ಮೀಯರು ಪಾಲ್ಗೊಳ್ಳೊತ್ತಾರೆ.

Eid Milad b

ಈದ್ ಮಿಲಾದ್ ಆಚರಣೆಯ ಬಗ್ಗೆ ಕೆಲ ಚರ್ಚೆಗಳು ಸಹ ನಡೆದಿವೆ. ಪ್ರವಾದಿ ಮೊಹಮ್ಮದ್ ಅವರು ಎಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಹದೀಸ್, ಖುರಾನ್ ಎಲ್ಲಿಯೂ ಜಯಂತಿ ಆಚರಿಸಿ ಎಂದು ಹೇಳಿಲ್ಲ. ಹಾಗಾಗಿ ಇಸ್ಲಾಂನಲ್ಲಿ ಹುಟ್ಟುಹಬ್ಬ ಆಚರಣೆ ನಿಷಿದ್ಧ ಎಂಬುವುದು ಕೆಲವರ ವಾದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *