– ಕೋಲಾರ, ಚಿತ್ರದುರ್ಗದಲ್ಲೂ ಜಪ
ಚಿಕ್ಕಮಗಳೂರು/ಕೋಲಾರ/ಕೊಪ್ಪಳ: ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಹುನ್ನಾರ ನಡೆದಿದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
Advertisement
ನಾಗಮಂಗಲ ಹೊತ್ತಿ ಉರಿದ ಬೆನ್ನಲ್ಲೇ ಚಿಕ್ಕಮಗಳೂರು (Chikkamagaluru) ನಗರದ ಕಡೂರು ಹೆದ್ದಾರಿಯಲ್ಲಿ ಭಾನುವಾರ 6 ಅಪ್ರಾಪ್ತರು ಬೈಕ್‌ಗೆ ಪ್ಯಾಲೆಸ್ತೀನ್ ಬಾವುಟ ಕಟ್ಟಿಕೊಂಡು ಅಡ್ಡಾಡಿದ್ದರು.
Advertisement
ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸರು ಐವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿ 16-17 ವರ್ಷದ ಅಪ್ರಾಪ್ತರು ಅಂತ ಬಿಟ್ಟು ಕಳಿಸಿದ್ದಾರೆ. ಆದರೆ ಸೂಕ್ತ ತನಿಖೆ ನಡೆಸದೇ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹಿಂದೂ (Hindu) ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದನ್ನೂ ಓದಿ: ಪದವಿ ಕಾರ್ಯಕ್ರಮದಲ್ಲಿ Free Palestine ಘೋಷಣೆ – ಯುಎಇಯಿಂದ ವಿದ್ಯಾರ್ಥಿ ಗಡಿಪಾರು
Advertisement
Advertisement
ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು 6 ಅಪ್ರಾಪ್ತರ ವಿರುದ್ಧ ದೇಶವಿರೋಧಿ ಕೃತ್ಯ, ಕಾನೂನು ಬಾಹಿರ ಚಟುವಟಿಕೆ ಅಂತ ಬಿಎನ್‌ಎಸ್ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಬೈಕ್, ಬಾವುಟವನ್ನು ಜಪ್ತಿ ಮಾಡಿದ್ದಾರೆ.
ಚಿಕ್ಕಮಗಳೂರು ಬಳಿಕ ಕೋಲಾರದಲ್ಲೂ ಫ್ರೀ ಪ್ಯಾಲೆಸ್ತೀನ್ (Free Palestine) ಬಾವುಟ ಹಾರಾಡಿದೆ. ಕೋಲಾರ ನಗರದ ಅಂಜುಮಾನ್ ಸಂಸ್ಥೆ ಎದುರು ಪ್ಯಾಲೆಸ್ತೀನ್ ಬಾವುಟ ಹಾರಾಡಿದ್ದನ್ನು ಗಮನಿಸಿದ ಪೊಲೀಸರು ತೆರವು ಮಾಡಿದ್ದಾರೆ. ಚಿತ್ರದುರ್ಗದ ಗಾಂಧಿ ವೃತ್ತದ ಬಳಿ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಜಿಂದಾಬಾದ್ ಅಂತ ಕೆಲವರು ಬಾವುಟ ಹಿಡಿದು ಘೋಷಣೆ ಕೂಗಿದ್ದಾರೆ. ತಕ್ಷಣವೇ ಪೊಲೀಸರು ವಾರ್ನಿಂಗ್ ಕೊಟ್ಟು ಬಾವುಟ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಚೇರಿಯಲ್ಲೇ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ 28 ಗೂಗಲ್ ಸಿಬ್ಬಂದಿ ವಜಾ
ಕೊಪ್ಪಳದ ಕಾರಟಗಿಯಲ್ಲಿ ವಕ್ಫ್ ಮಸೂದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನಾ ಭಾಷಣದಲ್ಲಿ ಎಸ್‌ಡಿಪಿಐ ಕಾರ್ಯಕರ್ತ ಇಮ್ರಾನ್ ಸಾವರ್ಕರ್ ಸಂತತಿಯವರು ಬಂದರೂ ಕೂಡ ಮುಸಲ್ಮಾನರ ಆಸ್ತಿಯನ್ನು ಮುಟ್ಟಲಿಕ್ಕೆ ಆಗುವುದಿಲ್ಲ. ಆ ಸಂತತಿಗಳನ್ನು ಮುಗಿಸಲಿಕ್ಕೆ ಈ ಮುಸಲ್ಮಾನ ಸಮುದಾಯ ಇದೆ. ಈ ಸ್ಪಷ್ಟ ಸಂದೇಶವನ್ನ ಬಿಜೆಪಿ, ಆರ್‌ಎಸ್‌ಎಸ್‌ಗೆ ನೀಡಲಿಕ್ಕೆ ಇಷ್ಟ ಪಡುತ್ತೇನೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾನೆ. ಇಮ್ರಾನ್ ವಿರುದ್ಧ ಕಾರಟಗಿಯ ಬಿಜೆಪಿ ನಾಯಕ ಮಂಜುನಾಥ್ ಮಸ್ಕಿ ದೂರು ದಾಖಲಿಸಿದ್ದಾರೆ.