ನವದೆಹಲಿ: ಇಂದು ದೇಶಾದ್ಯಂತ ರಂಜಾನ್ ಅಥವಾ ಈದ್ ಉಲ್ ಫಿತರ್ (Eid al-Fitr) ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ನಿಮಿತ್ತ ಇಂದು ಹಲವಾರು ರಾಜ್ಯಗಳು ಮತ್ತು ನಗರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ಇಲಾಖೆ ವಿವರವಾದ ಆದೇಶವನ್ನು ಬಿಡುಗಡೆ ಮಾಡಿತು. ಈದ್ ಹಬ್ಬ ಸೇರಿದಂತೆ ನಗರದಲ್ಲಿ 5 ದಿನಗಳನ್ನು ʼDry Dayʼ ಎಂದು ಘೋಷಿಸಿತು. ಈದ್ (ಏಪ್ರಿಲ್ 11), ರಾಮ ನವಮಿ (ಏಪ್ರಿಲ್ 17) ಮತ್ತು ಮಹಾವೀರ ಜಯಂತಿ (ಏಪ್ರಿಲ್ 21) ರಂದು ದೆಹಲಿಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿತ್ತು.
Advertisement
Advertisement
ಇದರ ಜೊತೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಡಿ ಭಾಗಗಳಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಸಂಜೆ 6ರಿಂದ 26ರ ಸಂಜೆ 6ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಳನೀರು ಕುಡಿದು 15 ಮಂದಿ ಅಸ್ವಸ್ಥ!
Advertisement
Advertisement
ದೇಶದಲ್ಲಿ ಯಾವ ದಿನ ಮದ್ಯ ಸಿಗಲ್ಲ..? : ಏಪ್ರಿಲ್ 14: ಅಂಬೇಡ್ಕರ್ ಜಯಂತಿ, ಏಪ್ರಿಲ್ 17: ರಾಮ ನವಮಿ, ಏಪ್ರಿಲ್ 21: ಮಹಾವೀರ ಜಯಂತಿ, ಮೇ 1: ಮಹಾರಾಷ್ಟ್ರ ದಿನ (ಮಹಾರಾಷ್ಟ್ರದಲ್ಲಿ ಮಾತ್ರ), ಮೇ 23: ಬುದ್ಧ ಪೂರ್ಣಿಮೆ, ಮೇ 17: ಬಕ್ರೀದ್, ಜುಲೈ 17: ಮೊಹರಂ ಮತ್ತು ಆಷಾದಿ ಏಕಾದಶಿ, ಜುಲೈ 21: ಗುರು ಪೂರ್ಣಿಮೆ, ಆಗಸ್ಟ್ 15: ಸ್ವಾತಂತ್ರ್ಯ ದಿನ, ಆಗಸ್ಟ್ 2: ಜನ್ಮಾಷ್ಠಮಿ, ಸೆಪ್ಟೆಂಬರ್ 7: ಗಣೇಶ ಚತುರ್ಥಿ (ಮಹಾರಾಷ್ಟ್ರದಲ್ಲಿ ಮಾತ್ರ), ಸೆಪ್ಟೆಂಬರ್ 17: ಈದ್-ಎ-ಮಿಲಾದ್ ಮತ್ತು ಅನಂತ ಚತುರ್ದಶಿ.
ಅಕ್ಟೋಬರ್ 2: ಗಾಂಧಿ ಜಯಂತಿ, ಅಕ್ಟೋಬರ್ 12: ದಸರಾ, ಅಕ್ಟೋಬರ್ 17: ಮಹರ್ಷಿ ವಾಲ್ಮೀಕಿ ಜಯಂತಿ, ನವೆಂಬರ್ 1: ದೀಪಾವಳಿ, ನವೆಂಬರ್ 12: ಕಾರ್ತಿಕಿ ಏಕಾದಶಿ, ನವೆಂಬರ್ 15: ಗುರುನಾನಕ್ ಜಯಂತಿ, ಡಿಸೆಂಬರ್ 25: ಕ್ರಿಸ್ಮಸ್ ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈದ್ ಉಲ್-ಫಿತರ್: ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ನ 10 ನೇ ತಿಂಗಳಾದ ಶವ್ವಾಲ್ನ ಮೊದಲ ದಿನದಂದು ಈದ್ ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ಇದು ತಿಂಗಳ ಅವಧಿಯ ರಂಜಾನ್ ಉಪವಾಸ ಮತ್ತು ಶವ್ವಾಲ್ ಆರಂಭವನ್ನು ಸೂಚಿಸುತ್ತದೆ. ಹಿಂದಿನಿಂದಲೂ ಇಸ್ಲಾಮಿಕ್ ಸಂಸ್ಕೃತಿಯ ಭಾಗವಾಗಿರುವ ಚಂದ್ರನ ದರ್ಶನದಿಂದಾಗಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಪ್ರವಾದಿ ಮುಹಮ್ಮದ್ ಹೊಸ ತಿಂಗಳ ಆರಂಭವನ್ನು ಸೂಚಿಸಿದಂತೆ ಅರ್ಧಚಂದ್ರನ ದೃಶ್ಯಗಳ ಸುದ್ದಿಗಾಗಿ ಕಾಯುತ್ತಿದ್ದರು ಎಂದು ನಂಬಲಾಗಿದೆ.