ಕೈರೋ: ಕೋತಿಗೆ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ 25 ವರ್ಷದ ಮಹಿಳೆಯೊಬ್ಬಳಿಗೆ ಈಜಿಪ್ಟಿನ ಕೋರ್ಟ್ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುವಂತೆ ತೀರ್ಪು ನೀಡಿದೆ.
ಬಸ್ಮಾ ಅಹ್ಮದ್ ಶಿಕ್ಷೆಗೆ ಗುರಿಯಾಗಿರುವ ಮಹಿಳೆ. ಕೋತಿಗೆ ಲೈಂಗಿಕವಾಗಿ ಹಿಂಸೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈಕೆಯನ್ನು ಬಂಧಿಸಲಾಗಿತ್ತು. ನಂತರ ತನಿಖೆ ಮಾಡಿ ಮನ್ಸೌರಾ ನಗರದಲ್ಲಿನ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ.
Advertisement
ವಿಡಿಯೋ ದಲ್ಲಿ ಏನಿದೆ?
ಮ್ಯಾನ್ಸೌರದಲ್ಲಿರುವ ನೈಲ್ ಡೆಲ್ಟಾ ನಗರದಲ್ಲಿ ಪ್ರಾಣಿಗಳ ಅಂಗಡಿಗೆ ಬಸ್ಮಾ ಅಹ್ಮದ್ ಹೋಗಿದ್ದಳು. ಈ ವೇಳೆ ಅಲ್ಲಿದ್ದ ಕೋತಿಯ ಜನನಾಂಗವನ್ನು ಮುಟ್ಟಿ ಹಿಂಸಿಸುತ್ತಿದ್ದಳು. ಅಲ್ಲಿದ್ದ ಸುತ್ತಮುತ್ತಲಿನ ಜನರು ಈಕೆಯ ವರ್ತನೆಯನ್ನು ನೋಡಿ ನಕ್ಕಿದ್ದಾರೆ. ಅಲ್ಲದೇ ಮಹಿಳೆಯ ಈ ಕುಚೇಷ್ಟೆಯನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋ ವೈರಲ್ ಆಗಿದೆ.
Advertisement
Advertisement
ವಿಡಿಯೋ 30 ಸೆಕೆಂಡ್ ಗಳಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಹಿಳೆಯ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಬಳಿಕ ಅಕ್ಟೋಬರ್ ನಲ್ಲಿ ಮಹಿಳೆಯನ್ನು ಬಂಧಿಸಲಾಗಿತ್ತು. ಮೊದಲು ತನ್ನ ಮೇಲಿನ ಆರೋಪವನ್ನು ಮಹಿಳೆ ನಿರಾಕರಿಸಿದ್ದಳು. ಬಳಿಕ ಕೋರ್ಟ್ ನಲ್ಲಿ ಮಹಿಳೆ ತಪ್ಪೊಪ್ಪಿಕೊಂಡಿದ್ದು, ನಾನು ಕೋತಿಯನ್ನು ನಗಿಸಲು ಈ ತಮಾಷೆ ಮಾಡಿದ್ದೇನೆ. ಆದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್ಲೋಡ್ ಮಾಡಿದ್ದಾರೆ ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಳು.
Advertisement
ಈ ಕುರಿತು ತನಿಖೆ ನಡೆಸಿದ ಮ್ಯಾನ್ಸೌರಾ ನ್ಯಾಯಾಲಯ ಮಹಿಳೆಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv