ತುಮಕೂರು: ಕೋಳಿಮೊಟ್ಟೆಯನ್ನು ಸಾಗಿಸುತಿದ್ದ ವಾಹನಕ್ಕೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕೋಳಿ ಮೊಟ್ಟೆ ರಸ್ತೆಪಾಲಾದ ಘಟನೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಹೊಸಪೇಟೆಯಿಂದ ಬೆಂಗಳೂರಿಗೆ ಕೋಳಿ ಮೊಟ್ಟೆಯನ್ನು ತುಂಬಿಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಟೈರ್ ಪಂಚರ್ ಆಗಿ ನಿಂತ ವಾಹನಕ್ಕೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು, ಮೊಟ್ಟೆ ವಾಹನ ಪಲ್ಟಿಯಾಗಿದೆ.
Advertisement
Advertisement
ಲಕ್ಷಾಂತರ ಮೌಲ್ಯದ ಕೋಳಿ ಮೊಟ್ಟೆ ರಸ್ತೆ ಪಾಲಾಗಿದ್ದು, ಮೊಟ್ಟೆಗಾಗಿ ಜನರು ಮುಗಿಬಿದ್ದು ನಾ ಮುಂದು ತಾ ಮುಂದು ಎಂದು ಮೊಟ್ಟೆ ಹೊತ್ತೊಯ್ದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
Advertisement