ಕೊಡಗು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದವ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ಅದಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳನ್ನು ನಾವೀಗ ಬಿಡುಗಡೆ ಮಾಡಿದ್ದೇವೆ ಎಂದು ಕೊಡಗು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ಎಂಬಾತ ಮೊನ್ನೆ ಅರೆಸ್ಟ್ ಆದಾಗ ಬಿಜೆಪಿ ನಾಯಕರೇ ಅವನನ್ನು ಬಿಡಿಸಿದ್ದಾರೆ. ಈಗಲೂ ಕೂಡ ಅವನಿಗೆ ಜಾಮೀನು ಕೊಡಿಸಲು ಬಿಜೆಪಿ ನಾಯಕರು ಯತ್ನಿಸಿದ್ದಾರೆ. ಅವನು ಕಾಂಗ್ರೆಸ್ ಕಾರ್ಯಕರ್ತ ಆಗಿದ್ದರೆ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕಾಂಗ್ರೆಸ್ ಕಾರ್ಯಕರ್ತ – ಮೊಟ್ಟೆ ಎಸೆದಿದ್ದಕ್ಕೆ ಸಂಪತ್ ಕೊಟ್ಟ ಸ್ಪಷ್ಟನೆ ಏನು..?
Advertisement
Advertisement
ಆತ ಸೋಮವಾರಪೇಟೆ ಮೂಲದವನಂತೆ. ನಾನೂ ಕೂಡ ಸೋಮವಾರಪೇಟೆಯವನು. ಎಂದೂ ಕೂಡ ಅವನು ನಮಗೆ ಕಂಡೇ ಇಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಸಾಕ್ಷಿ ಕೊಡಲಿ. ಸಾಕ್ಷಿ ನೀಡಿದರೆ ಅವನು ಕಾಂಗ್ರೆಸ್ ಕಾರ್ಯಕರ್ತ ಅಂತ ಒಪ್ಪಿಕೊಳ್ಳೋಕೆ ನಾವು ಸಿದ್ಧ ಎಂದು ಸವಾಲು ಹಾಕಿದ್ದಾರೆ.
Advertisement
ಯಾವುದೋ ಒಂದು ಶಲ್ಯ ಹಾಕೊಂಡು ಫೋಟೋ ತೆಗೆಸಿಕೊಂಡ ತಕ್ಷಣ ಕಾಂಗ್ರೆಸ್ ಕಾರ್ಯಕರ್ತ ಆಗಲ್ಲ. ಬಿಜೆಪಿ ಶಾಸಕರು ಅವನ ಹೆಗಲ ಮೇಲೆ ಕೈ ಹಾಕಿಕೊಂಡ ಫೋಟೋ ಇದೆ. ಸೋಮವಾರಪೇಟೆ ಭಾಗದ ಜಿಲ್ಲಾ ಪಂಚಾಯತ್ ಕಾಮಗಾರಿಗಳನ್ನು ಸಂಪತ್ ಮಾಡ್ತಿದ್ದಾನೆ. ಶಾಸಕರ ಆಮಿಷಕ್ಕೆ ಒಳಗಾಗಿ ಸಂಪತ್ ತಾನು ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮೊಟ್ಟೆ ಎಸೆದ ಪ್ರಕರಣ : ಸಂಪತ್ ಯಾರು ಅಂತ ನಮಗೆ ಗೊತ್ತಿಲ್ಲ: ಕೆ.ಜಿ. ಬೋಪಯ್ಯ
Advertisement
ಬ್ರಿಟಿಷರ ಸಂತತಿಯೇ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು. ಆತ ಕಾಂಗ್ರೆಸ್ ಕಾರ್ಯಕರ್ತ ಅಲ್ಲ ಎಂದು ಮಿಥುನ್ ಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಅಲ್ಲ, ಅವನ್ಯಾರು ಗೊತ್ತೇ ಇಲ್ಲ. ಮಡಿಕೇರಿಯ ಬಿಜೆಪಿ ಶಾಸಕರ ಜೊತೆ ಆತನ ಫೋಟೋ ಇದೆ. ಅದೇ ಹೇಳುತ್ತದೆ ಆತ ಬಿಜೆಪಿಯ ಕಾರ್ಯಕರ್ತ ಅಂತಾ ಎಂದು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್.ಪೊನ್ನಣ್ಣ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!
ಕುಶಾಲನಗರದಲ್ಲಿ ಆತ ಅರೆಸ್ಟ್ ಆದಾಗ ಜಾಮೀನು ಕೊಟ್ಟು ಬಿಡಿಸಿದ್ಯಾರು? ಅದನ್ನ ಬಿಜೆಪಿಯವರು ಮೊದಲು ಹೇಳಲಿ. 26ರಂದು ನಾವು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿಯೇ ಹಾಕುತ್ತೇವೆ. ಅವರೂ ಮಾಡಲಿ, ಕಾನೂನು ಸುವ್ಯವಸ್ಥೆಯನ್ನ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.