ಇತ್ತೀಚೆಗೆ ಮಳೆಯಾಗಿದ್ದರಿಂದ ಬೆಚ್ಚನೆಯ ವಾತಾವರಣವಿದೆ. ಇನ್ನೂ ರಜಾ ದಿನಗಳಲ್ಲಿ ಮನೆಯಲ್ಲಿದ್ದರೆ ಮಕ್ಕಳು, ಮನೆಯವರು ಖಾರವಾಗಿ ಏನಾದರೂ ತಿನ್ನಬೇಕು ಎಂದು ಕೇಳುತ್ತಿರುತ್ತಾರೆ. ಎಂದಿನಂತೆ ಎಗ್ ಫ್ರೈ, ಎಗ್ ಬುರ್ಜಿ ಮಾಡುತ್ತಿರುತ್ತೀರಿ. ಹೀಗಾಗಿ ನಿಮಗಾಗಿ ಸಿಂಪಲ್ ಆಗಿ ಸ್ಪೆಷಲ್ ಎಗ್ ರೋಲ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಗ್ರಿಗಳು
1. ಮೊಟ್ಟೆ – 4
2. ಈರುಳ್ಳಿ -1
3. ಹಸಿಮೆಣಸಿನಕಾಯಿ -4-5
4. ಉಪ್ಪು – ರುಚಿಗೆ ತಕ್ಕಷ್ಟು
5. ಕೊತ್ತಂಬರಿ – ಸ್ವಲ್ಪ
6. ಮೈದಾ – 2 ಚಮಚ
7. ಕಾರ್ನ್ ಫ್ಲೋರ್ – 2 ಚಮಚ
8. ಎಣ್ಣೆ – ಕರಿಯಲು
9. ನೀರು
10. ಬ್ರೆಡ್ ಕ್ರಮ್ಸ್ – ಒಂದು ಬಟ್ಟಲು
Advertisement
Advertisement
ಮಾಡುವ ವಿಧಾನ
* ಮೊದಲು ಒಂದು ಮಿಕ್ಸಿ ಬೌಲ್‍ಗೆ ಮೊಟ್ಟೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಸೇರಿಸಿ ಬೀಟ್ ಮಾಡಿ.
* ಒಂದು ಕೇಕ್ ಪ್ಯಾನ್‍ಗೆ ಎಣ್ಣೆ ಸವರಿ ಬೀಟ್ ಮಾಡಿದ ಮೊಟ್ಟೆ ಹಾಕಿ ಬೇಯಿಸಿ.
* ಕೇಕ್ ಪ್ಯಾನ್ ಇಲ್ಲದಿದ್ದಲ್ಲಿ ಒಂದು ಸ್ಟೀಲ್ ಕುಕ್ಕರ್ ಪ್ಯಾನ್‍ಗೆ ಎಣ್ಣೆ ಸವರಿ ಬೇಯಿಸಬಹುದು
* ಈಗ ಬೇಯಿಸಿದ ಮೊಟ್ಟೆಯನ್ನು ಪ್ಯಾನ್‍ನಿಂದ ಬೇರ್ಪಡಿಸಿ, ಸಣ್ಣಗೆ ಕಟ್ ಮಾಡಿಕೊಳ್ಳಿ.
* ಈಗ ಒಂದು ಬೌಲ್‍ಗೆ ಮೈದಾ, ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಸೇರಿಸಿ ತೆಳ್ಳಗೆ ಕಲಸಿಕೊಳ್ಳಿ
* ಒಂದು ತಟ್ಟೆಗೆ ಬ್ರೆಡ್ ಕ್ರಮ್ಸ್ ಹಾಕಿ
* ಈಗ ಸ್ಲೈಸ್ ಕಟ್ ಮಾಡಿದ ಮೊಟ್ಟೆಯನ್ನು ಮೈದಾ ಬ್ಯಾಟರ್ ನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್ ನಲ್ಲಿ ಹೊರಳಿಸಿ.
* ಈಗ ಕಾದ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬರೋವರೆಗೆ ಫ್ರೈ ಮಾಡಿದರೆ ಸ್ಪೆಷಲ್ ಎಗ್ ರೋಲ್ ರೆಡಿ.