ರಾಸಾಯನಿಕ ಅಂಶ ಇರುವ ಕ್ರೀಮ್‍ಗಳನ್ನು ಬಳಸುವುದರಿಂದ ಅದು ನಿಮ್ಮ ತ್ವಚೆಯನ್ನು ಅತ್ಯಂತ ಶುಷ್ಕ ಮತ್ತು ದುರ್ಬಲವಾಗುವಂತೆ ಮಾಡುತ್ತದೆ. ಆದ್ದರಿಂದ ತ್ವಚೆಯನ್ನು ಆರೋಗ್ಯವಾಗಿಡುವ ಫೇಸ್ ಪ್ಯಾಕ್ ಬಳಸಿ. ನೀವು ಮನೆಯಲ್ಲಿಯೇ ತಯಾರಿಸಿದ ಫೇಸ್ ಪ್ಯಾಕ್ ನಿಮ್ಮ ತ್ವಚೆ ಅಂದವಾಗಿ ಕಾಣುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಚರ್ಮದ ಆರೈಕೆಯ ವಿಷಯಕ್ಕೆ ಬಂದಾಗ ಬಹುಶಃ ನೈಸರ್ಗಿಕ ಪದಾರ್ಥಗಳಿಗೆ ಪರ್ಯಾಯವಾಗಿ ಮತ್ತೊಂದಿಲ್ಲ ಎಂದೇ ಹೇಳಬಹುದು.
Advertisement
ಮೊಡವೆಗಳು, ಚರ್ಮ ಸುಕ್ಕುಗಟ್ಟುವುದು ಹೀಗೆ ಇನ್ನಿತರ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತವೆ. ಇದರಿಂದ ಮುಖದ ಸೌಂದರ್ಯ ಹಾಳಾಗುವುದು ಮಾತ್ರವಲ್ಲದೆ ಚರ್ಮದ ಮೃದುತ್ವ ಕೂಡ ಮೊದಲಿನಂತೆ ಇರುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲು ನೀವು ಮೊಟ್ಟೆಯಿಂದ ತಯಾರಿಸುವ ಕೆಲವು ಫೇಸ್ ಮಾಸ್ಕ್‌ಗಳನ್ನು ಬಳಸಿ.
Advertisement
Advertisement
* ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ನೀರಿನಿಂದ ತೊಳೆಯಿರಿ. ಒಂದು ಕೋಳಿ ಮೊಟ್ಟೆಯನ್ನು ತೆಗೆದುಕೊಂಡು ಅದರ ಬಿಳಿಭಾಗವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಬೇಕು. ಸುಮಾರು 10 ರಿಂದ 15 ನಿಮಿಷಗಳು ಇದನ್ನು ಹಾಗೆ ಇರಲು ಬಿಟ್ಟು, ಶುದ್ಧವಾದ ನೀರಿನಿಂದ ನಂತರ ಮುಖ ತೊಳೆದುಕೊಳ್ಳಿ. ನಿಮ್ಮ ರಕ್ತಸಂಚಾರವನ್ನು ಅತ್ಯುತ್ತಮಗೊಳಿಸುವ ಮತ್ತು ನಿಮ್ಮ ತ್ವಚೆಗೆ ಮೊದಲಿಗಿಂತ ಹೊಳಪಿನ ಪ್ರಭಾವವನ್ನು ಒದಗಿಸುವ ಗುಣವನ್ನು ಇದು ಪಡೆದಿರುವುದರಿಂದ ನಿಮ್ಮ ಚರ್ಮದ ಮೇಲಿನ ಸುಕ್ಕುಗಳು ಮಾಯವಾಗಿ ನಿಮ್ಮ ತ್ವಚೆ ಸದೃಢತೆಯಿಂದ ಕೂಡಿರುತ್ತದೆ. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ
Advertisement
* ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಮೊಟ್ಟೆಯ ಬಿಳಿ ಭಾಗ, ಕ್ಯಾರೆಟ್ ಪೆಸ್ಟ್, ಹಾಲನ್ನು ಹಾಕಿ ಮಿಶ್ರಣ ಮಾಡಿ ಗಟ್ಟಿಯಾದ ಪೇಸ್ಟ್‍ನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಸುಮಾರು 15 ರಿಂದ 20 ನಿಮಿಷಗಳ ಇದನ್ನು ಹಾಗೆ ಇರಲು ಬಿಟ್ಟು ನಂತರ ತಂಪಾದ ನೀರಿನಲ್ಲಿ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಈ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಸುಕ್ಕನ್ನು ಹೊಗಲಾಡಿಸುತ್ತದೆ.
* ಮೊಟ್ಟೆಯ ಬಿಳಿ ಭಾಗ, ಕಡಲೆಹಿಟ್ಟು ಮತ್ತು ಕೆಲವು ಹನಿಗಳಷ್ಟು ನಿಂಬೆಹಣ್ಣಿನ ರಸವನ್ನು ಸೇರಿಸಿ ಗಟ್ಟಿಯಾದ ಪೇಸ್ಟ್ ತಯಾರು ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ಕಾಲಹಾಗೇ ಬಿಟ್ಟು ನಂತರ ಮುಖವನ್ನು ತೊಳೆಯಿರಿ. ನಿಂಬೆಹಣ್ಣಿಗೆ ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಸ್ವಚ್ಛಮಾಡುವ ಗುಣಲಕ್ಷಣಗಳು ಇರುವುದರಿಂದ ಚರ್ಮದಲ್ಲಿ ಕಂಡುಬರುವ ಕೊಳೆ ಮತ್ತು ತ್ವಚೆಯ ರಂಧ್ರಗಳಲ್ಲಿ ಕಂಡುಬರುವ ಕಲುಷಿತ ಅಂಶಗಳು ಇಲ್ಲವಾಗುತ್ತವೆ.