ಬೇಕಾಗುವ ಸಾಮಗ್ರಿಗಳು:
* ಬೇಯಿಸಿದ ಮೊಟ್ಟೆ – 4
* ಟೊಮೆಟೊ 3
* ಈರುಳ್ಳಿ 2
* ಒಣಮೆಣಸು – 6 ರಿಂದ 7
* ಕಾಳುಮೆಣಸು – 1 ಚಮಚ
* ದನಿಯಾ ಪೌಡರ್ – 1 ಚಮಚ
* ಜೀರಿಗೆ – 1 ಚಮಚ
* ಬೆಳ್ಳುಳ್ಳಿ – 6 ಎಸಳು
* ದಾಲ್ಚಿನ್ನಿ ಎಲೆ- 1
* ಶುಂಠಿ ಪೇಸ್ಟ್- 1ಚಮಚ
* ಅರಿಸಿಣ ಪುಡಿ – ಅರ್ಧ ಚಮಚ
* ಕರಿಬೇವು – ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ:
* ಬಾಣಲೆಗೆ ಒಣಮೆಣಸು, ಕಾಳುಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಹಾಗೂ ದಾಲ್ಚಿನ್ನಿ ಹಾಕಿ ಪರಿಮಳ ಬರುವವರೆಗೂ ಹುರಿಯಿರಿ. ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನೂ ಓದಿ: ರಷ್ಯಾ-ಉಕ್ರೇನ್ ವಾರ್ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೈನಿಕ
Advertisement
Advertisement
* ನಂತರ ಪಾತ್ರೆಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಕರಿಬೇವು ಹಾಗೂ ಈರುಳ್ಳಿ, ಈರುಳ್ಳಿ, ಅರಿಸಿನ, ಉಪ್ಪು ಹಾಗೂ ಈಗಾಲೇ ರುಬ್ಬಿಕೊಂಡ ಮಸಾಲೆ ಹಾಕಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ಬೇಯಿಸಿ ಸ್ಮ್ಯಾಶ್ ಮಾಡಿದ ಟೊಮೆಟೊ ಸೇರಿಸಿ ಹದಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ. ಈ ಮಿಶ್ರಣ ಕುದಿಯಲು ಆರಂಭಿಸಿದ ಮೇಲೆ ಬೇಯಿಸಿದ ಮೊಟ್ಟೆಯನ್ನು ಅರ್ಧ ಮಾಡಿ ಹಾಕಿ. ಮಿಶ್ರಣ ದಪ್ಪಕ್ಕೆ ಆಗುವವರೆಗೂ ಕುದಿಸಿದರೆ ಎಗ್ ಘೀ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು