ಉಡುಪಿ: ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಕುರಿತಂತೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ. ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ನಡುವೆ ಉಡುಪಿ ಶಾಸಕ ರಘುಪತಿ ಭಟ್ ಮೊಟ್ಟೆ ಪರ ಬ್ಯಾಟ್ ಬೀಸಿದ್ದಾರೆ.
Advertisement
ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊಟ್ಟೆ ವಿತರಣೆ ಆದರೆ ಎಲ್ಲರೂ ತಿನ್ನಲೇಬೇಕು ಅಂತ ಇಲ್ಲ. ಮೊಟ್ಟೆ ಕೊಟ್ಟರೆ ಅದು ತಪ್ಪು ಎಂದು ನನಗೆ ಅನ್ನಿಸುವುದಿಲ್ಲ. ಶಾಲೆಯಲ್ಲಿ ವೆಜಿಟೇರಿಯನ್ ಇದ್ದ ಮಕ್ಕಳು ಮೊಟ್ಟೆ ತಿನ್ನುವುದಿಲ್ಲ ಎಂದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್
Advertisement
Advertisement
ಮೊಟ್ಟೆ ವಿತರಣೆ ಸಂದರ್ಭ ಶಾಲೆಯಲ್ಲಿ ಪ್ರತ್ಯೇಕ ಟೇಬಲ್ ಪ್ರತ್ಯೇಕ ಕೊಠಡಿ ರಚನೆಯಾಗಲಿ. ಶಾಲೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಸೂಕ್ತ ಎಂದು ನನಗೆ ಅನ್ನಿಸುತ್ತದೆ. ಮೊಟ್ಟೆ ವಿತರಣೆ ಮಾಡದೆ ಇರುವುದು ಸೂಕ್ತ ಅಲ್ಲ. ಸಣ್ಣ ವಯಸ್ಸಿಗೆ ಮಕ್ಕಳು ಮೊಟ್ಟೆಗೆ ಪ್ರಭಾವಿತರಾಗುವುದಿಲ್ಲ. ದೊಡ್ಡವರಾದ ಮೇಲೆ ಅವರವರಿಗೆ ಸ್ವಾತಂತ್ರ್ಯ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಇದನ್ನೂ ಓದಿ: ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೊಸ ಗೈಡ್‌ಲೈನ್ಸ್
Advertisement