Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು

Districts

ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು

Public TV
Last updated: July 23, 2025 8:55 am
Public TV
Share
2 Min Read
Mandya Egg Fight
SHARE

ಮಂಡ್ಯ: ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ಆದರೆ ಮೊಟ್ಟೆ (Egg) ವಿತರಣೆಯೇ ಮಂಡ್ಯದ ಗ್ರಾಮವೊಂದರಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಮೊಟ್ಟೆ ಕೊಡುವುದೇ ಆದರೆ ನಮ್ಮ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದು ಪೋಷಕರು ಹೇಳ್ತಿದ್ದಾರೆ.

Mandya Egg Fight 1

ಮಂಡ್ಯದ (Madya) ಆಲಕೆರೆ (Alakere) ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ 120 ವಿದ್ಯಾರ್ಥಿಗಳ ಪೈಕಿ 80 ಮಕ್ಕಳು ಮೊಟ್ಟೆ ಬೇಡ ಅಂತಿದ್ದಾರೆ. ಪೋಷಕರು ಕೂಡ ಮೊಟ್ಟೆ ವಿತರಣೆಗೆ ವಿರೋಧಿಸಿದ್ದು, ಮೊಟ್ಟೆ ಕೊಟ್ರೆ ನಮ್ಮ ಮಕ್ಕಳಿಗೆ ಟಿಸಿ ಕೊಡಿ ಬೇರೆ ಶಾಲೆಗೆ ಸೇರಿಸ್ತೀವಿ ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

ಅಂದಹಾಗೇ ಇವರು ಹೀಗೆ ಹೇಳಲು ಕಾರಣ ಕೂಡ ಇದೆ. ಶಾಲೆ ಸಮೀಪದಲ್ಲೇ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನವಿದೆ. ಹಿಂದಿನಿಂದಲೂ ದೇವಾಲಯ ಸುತ್ತಮುತ್ತ ಮಾಂಸಾಹಾರ ನಿಷೇಧಿಸಲಾಗಿದೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ನಡೆದು ಬಂದಿದ್ದು, ಶಾಲೆಯಲ್ಲಿ ಮೊಟ್ಟೆ ನೀಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಬೇಡಿ ಎಂದು ಪೋಷಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣ – ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ; ಓರ್ವ ಸಾವು

Mandya Egg Fight 2

ಇದೇ ಕಾರಣದಿಂದ ಕಳೆದ 3 ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಸರ್ಕಾರ ಮೊಟ್ಟೆ ವಿತರಿಸಲು ನಿರ್ಧರಿಸಿದಾಗಲೂ ಈ ಶಾಲೆಯಲ್ಲಿ ಮೊಟ್ಟೆ ಬದಲಿಗೆ ಬಾಳೆಹಣ್ಣು, ಚಿಕ್ಕಿ ನೀಡಲು ಶಾಲೆಯ ಎಸ್‌ಡಿಎಂಸಿ ನಿರ್ಧರಿಸಿದೆ. ಅಂದಿನಿಂದ ಇಲ್ಲಿಯವರೆಗೂ ಈ ನಿಯಮವನ್ನೇ ಪಾಲಿಸಿಕೊಂಡು ಬರಲಾಗ್ತಿದೆ. ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!

ಆದರೆ ಈಗ ಗ್ರಾಮದ ಕೆಲವರು ಮಕ್ಕಳಿಗೆ ಪೌಷ್ಟಿಕಾಹಾರ ಪೂರೈಕೆ ದೃಷ್ಟಿಯಿಂದ ಮೊಟ್ಟೆ ವಿತರಿಸಲು ಆಗ್ರಹಿಸಿದ್ದಾರೆ. ಶಿಕ್ಷಣ ಇಲಾಖೆ ಕೂಡ ಸರ್ಕಾರದ ನಿಯಮದಂತೆ ಮೊಟ್ಟೆ ಕೊಡಲು ಮುಂದಾಗಿದ್ದು, ಅಧಿಕಾರಿಗಳ ನಿರ್ಧಾರ ಗ್ರಾಮಸ್ಥರನ್ನ ಕೆರಳಿಸಿದೆ. ಮೊಟ್ಟೆ ತಿನ್ನುವ ಮಕ್ಕಳಿಗೆ ಅವರ ಮನೆಗೆ ಮೊಟ್ಟೆ ತಲುಪಿಸಿ. ಆದರೆ ಶಾಲೆಯಲ್ಲಿ ಮೊಟ್ಟೆ ವಿತರಿಸಿ ಜನರ ಭಾವನೆಗೆ ನೋವುಂಟು ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಆಲಕೆರೆ ಗ್ರಾಮದ ಮೊಟ್ಟೆ ವಿವಾದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ. ಮೊಟ್ಟೆ ಕೊಟ್ಟರೇ 80 ವಿದ್ಯಾರ್ಥಿಗಳು ಶಾಲೆ ಬಿಡುವ ಆತಂಕ ಒಂದೆಡೆಯಾದರೆ, ಮೊಟ್ಟೆ ಕೊಡದಿದ್ರೆ ಸರ್ಕಾರದ ಪೌಷ್ಟಿಕಾಹಾರ ಪೂರೈಕೆ ನಿಯಮ ಉಲ್ಲಂಘನೆಯಾಗುವ ಭಯ ಅಧಿಕಾರಿಗಳನ್ನು ಕಾಡುತ್ತಿದೆ.

TAGGED:AlakereEgg fightgovernment schoolmandyaಆಲಕೆರೆಮಂಡ್ಯಮೊಟ್ಟೆ ವಿವಾದ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Hubballi Love Jihad Case
Crime

ಬಗೆದಷ್ಟು ಬಯಲಾಗ್ತಿದೆ ಜಿಮ್ ಟ್ರೈನರ್ ಬಂಡವಾಳ – 8 ರಿಂದ 10 ಬಾರಿ ಗರ್ಭಪಾತದ ಮಾತ್ರೆ ನೀಡಿದ್ದ ಸಮೀರ್

Public TV
By Public TV
2 minutes ago
Hubballi Love Jihad Gym Trainer Sameer
Crime

ಪ್ರಜ್ಞೆ ತಪ್ಪಿದ್ದು ನಾನು, ರೆಕಾರ್ಡ್ ಮಾಡಿದ್ದು ಆಕೆ, ವೀಡಿಯೋಗಳೆಲ್ಲ ಅವಳ ಫೋನ್‌ನಲ್ಲಿದೆ: ಟ್ವಿಸ್ಟ್‌ ಕೊಟ್ಟ ಸಮೀರ್‌

Public TV
By Public TV
16 minutes ago
Bangladesh Tripura Border
Bengaluru City

ದೇಶದಲ್ಲೇ ಅತಿ ಹೆಚ್ಚು – ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು

Public TV
By Public TV
36 minutes ago
Hubballi Love Jihad 1
Crime

ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಸಂಕಷ್ಟ – ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಸಂತ್ರಸ್ತೆ

Public TV
By Public TV
1 hour ago
Bus Accident
Districts

ಸರ್ಕಾರಿ ಬಸ್‌ಗೆ ಗುದ್ದಿದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹನ; ಕೇಸ್‌ ದಾಖಲು

Public TV
By Public TV
2 hours ago
Nashik Accident 2
Crime

ನಾಸಿಕ್‌ನಲ್ಲಿ ಘೋರ ದುರಂತ – ಬಾವಿಗೆ ಉರುಳಿದ ಕಾರು, ಒಂದೇ ಕುಟುಂಬದ 9 ಮಂದಿ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?