ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಒಂದು ಕಡೆಯಲ್ಲ, ಎರಡು ಕಡೆ ಮೊಟ್ಟೆ ದಾಳಿ ನಡೆದಿರೋದು ಈಗ ಬಹಿರಂಗಗೊಂಡಿದೆ.
Advertisement
ಕೊಡಗಿನ ಗುಡ್ಡೆಹೊಸೂರು ಮತ್ತು ಮಡಿಕೇರಿಯ ಜನೆರಲ್ ತಿಮ್ಮಯ್ಯ ವೃತ್ತದಲ್ಲಿ ಮೊಟ್ಟೆ ದಾಳಿ ನಡೆದಿದೆ. ಬಿಜೆಪಿ ಗುಂಪಿನಿಂದಲೇ ಮೊಟ್ಟೆಗಳು ತೂರಿ ಬಂದಿವೆ. ಮೊಟ್ಟೆ ಎಸೆದ ಸಂಪತ್ ಯಾವ ಪಕ್ಷದವನು ಎಂಬ ವಿಚಾರದ ಕೆಸರೆರಚಾಟ ಮುಂದುವರಿದಿದೆ. ಇದನ್ನೂ ಓದಿ: ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸದೇ ಹೋದ್ರೆ 2024ರಲ್ಲಿ ಮೋದಿಗೆ ಸೋಲು: ಸುಬ್ರಮಣಿಯನ್ ಸ್ವಾಮಿ
Advertisement
Advertisement
ಈ ಮಧ್ಯೆ ಮಾಜಿ ಮಂತ್ರಿ ಜೀವಿಜಯ ಮಾತನಾಡುತ್ತಾ, ಸಂಪತ್ ಯಾರು ಗೊತ್ತೇ ಇಲ್ಲ ಅಂದಿದ್ರು. ಆದರೆ ಅದೇ ಜೀವಿಜಯ, 2018ರಲ್ಲಿ ಸಂಪತ್ ಸೋದರನ ಮದುವೆಯಲ್ಲಿ ಪಾಲ್ಗೊಂಡಿದ್ದ ಫೋಟೋ ವೈರಲ್ ಆಗಿವೆ. ಈ ಬಗ್ಗೆ ಜೀವಿಜಯ ಗೊಂದಲದ ಹೇಳಿಕೆ ನೀಡಿದ್ದಾರೆ. ಒಮ್ಮೆ ನನಗೆ ನೆನಪಿಲ್ಲ ಅಂದ್ರೆ, ಮತ್ತೊಮ್ಮೆ ಇದು ಬಿಜೆಪಿ ಕುತಂತ್ರ. ಎಡಿಟೆಡ್ ಫೋಟೋ, ಸಂಪತ್ ಗೊತ್ತೇ ಇಲ್ಲ ಎಂದಿದ್ದಾರೆ. ಈ ಮಧ್ಯೆ ಸರ್ಕಾರ ಸಿದ್ದರಾಮಯ್ಯಗೆ ಝಡ್ ಶ್ರೇಣಿ ಭದ್ರತೆ ಒದಗಿಸಿದೆ.
Advertisement
ಮೊಟ್ಟೆ ಎಸೆತ ಖಂಡನೆ ನೆಪದಲ್ಲಿ ಕಾಂಗ್ರೆಸ್ ಇದೇ 26ಕ್ಕೆ ಮಡಿಕೇರಿ ಚಲೋ ಹಮ್ಮಿಕೊಂಡಿದೆ. ಎಲ್ಲಾ ಶಾಸಕರಿಗೆ ಶಾಸಕಾಂಗ ಪಕ್ಷದ ಕಚೇರಿಯಿಂದ ಪತ್ರ ಹೋಗಿದೆ. 25,000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸುವ ಯೋಜನೆ ಹಾಕಿಕೊಂಡಿದೆ. ಆದರೆ ಕಾಂಗ್ರೆಸ್ ರ್ಯಾಲಿಗೆ ಪ್ರತಿಯಾಗಿ ಬಿಜೆಪಿ ಕೂಡ ಜನಜಾಗೃತಿ ಸಭೆ ಹಮ್ಮಿಕೊಂಡಿದೆ. ಶುಕ್ರವಾರ ಗಾಂಧಿ ಮೈದಾನದಲ್ಲಿ ಬಂದು ಸೇರುವಂತೆ ಕಾರ್ಯಕರ್ತರಿಗೆ ಶಾಸಕ ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ. ಕರಪತ್ರ ಹಂಚಲಾಗುತ್ತಿದೆ. ಈ 2 ಬೆಳವಣಿಗೆಯಿಂದ ಕೊಡಗಿನಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆ ಎಂದು ಗುಪ್ತಚರ ಪಡೆ ಎಚ್ಚರಿಸಿದೆ.
ಎರಡು ಪಕ್ಷಗಳ ಕಾರ್ಯಕರ್ತರಿಗೆ ಭದ್ರತೆ ಒದಗಿಸುವುದು ಸವಾಲಾಗಲಿದೆ ಎಂದು ಪೊಲೀಸ್ ಇಲಾಖೆ ವರದಿ ಮಾಡಿದೆ. ಸದ್ಯ ಯಾರಿಗೂ ಪೊಲೀಸರು ಅನುಮತಿ ನೀಡಿಲ್ಲ. ಕೊಡಗು ಜಿಲ್ಲಾಡಳಿತ ಆಗಸ್ಟ್ 26ರಂದು ನಿಷೇಧಾಜ್ಞೆ ವಿಧಿಸೋ ಬಗ್ಗೆ ಚಿಂತನೆ ನಡೆಸಿದೆ. ಈ ಮಧ್ಯೆ ಟಿಪ್ಪು ಸುಲ್ತಾನ್ ದಂಡೆತ್ತಿ ಬಂದಾಗಲೇ ಕೊಡಗಿನ ಜನ ಹೆದರಿಲ್ಲ. ಇನ್ನು ಸಿದ್ದು ಸುಲ್ತಾನ್‍ಗೆ ಹೆದರ್ತಾರಾ ಎಂದು ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ಯತೀಂದ್ರ ತಿರುಗೇಟು ನೀಡಿದ್ದಾರೆ.