ಮೊಟ್ಟೆಯಿಂದ ಮಾಡಲಾಗುವ ಯಾವ ರೀತಿಯ ಖಾದ್ಯವೂ ರುಚಿಕರವಾಗಿರುತ್ತದೆ. ಬೇಯಿಸಿದ ಮೊಟ್ಟೆಯಿಂದ ಹಿಡಿದು ಸಿಂಪಲ್ ಆಗಿ ಮಾಡಬಹುದಾದ ಆಮ್ಲೆಟ್ ವರೆಗೂ ಎಲ್ಲರೂ ಅದನ್ನು ಇಷ್ಟಪಡುತ್ತಾರೆ. ಹೆಚ್ಚಿನ ಪ್ರೋಟೀನ್ ಯುಕ್ತ ಮೊಟ್ಟೆಯನ್ನು ವಿವಿಧ ರೀತಿಯಲ್ಲಿ ಅಡುಗೆ ಮಾಡಬಹುದು. ಇಂದು ರುಚಿಕರ ಹಾಗೂ ಅತ್ಯಂತ ಸರಳವಾಗಿ ಮಾಡಬಹುದಾದ ಎಗ್ 65 ರೆಸಿಪಿ ನೋಡೋಣ.
ಬೇಕಾಗುವ ಪದಾರ್ಥಗಳು:
ಮೊಟ್ಟೆ – 3
ಮೆಣಸಿನ ಪುಡಿ- 1 ಟೀಸ್ಪೂನ್
ಕಡಲೆ ಹಿಟ್ಟು- ಎರಡುವರೆ ಟೀಸ್ಪೂನ್
ಹೆಚ್ಚಿದ ಕಾಯಿ ಮೆಣಸು- 2 ಟೀಸ್ಪೂನ್
ಹೆಚ್ಚಿದ ಬೆಳ್ಳುಳಿ- 2 ಟೀಸ್ಪೂನ್
ಹೆಚ್ಚಿದ ಶುಂಠಿ- 1 ಟೀಸ್ಪೂನ್
ಕಾಳು ಮೆಣಸಿನ ಪುಡಿ- 1/4 ಟೀಸ್ಪೂನ್
Advertisement
Advertisement
ಮಸಾಲೆಗೆ:
ಎಣ್ಣೆ- 1 ಟೀಸ್ಪೂನ್
ಕರಿಬೇವು- 8 ಎಸಳು
ಒಣಗಿದ ಕೆಂಪು ಮೆಣಸಿನ ಕಾಯಿ- 1
ಹೆಚ್ಚಿದ ಬೆಳ್ಳುಳ್ಳಿ- 1 ಟೀಸ್ಪೂನ್
ಹೆಚ್ಚಿದ ಶುಂಠಿ- 1 ಟೀಸ್ಪೂನ್
ಹಸಿರು ಮೆಣಸು- 1
ಕೆಂಪು ಮೆಣಸಿನ ಪುಡಿ- ಅರ್ಧ ಟೀಸ್ಪೂನ್
ಗರಂ ಮಸಾಲೆ- ಅರ್ಧ ಟೀಸ್ಪೂನ್
ಕೆಚಪ್- 3 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಬೇಯಿಸಿದ ಮೊಟ್ಟೆಗಳನ್ನು 4 ಭಾಗಗಳಾಗಿ ಕತ್ತರಿಸಿ.
* ಪಾತ್ರೆಯಲ್ಲಿ ಮೆಣಸಿನ ಪುಡಿ, ಕಡಲೆ ಹಿಟ್ಟು, ಹೆಚ್ಚಿದ ಹಸಿರು ಮೆಣಸಿನಕಾಯಿ, ಹೆಚ್ಚಿದ ಬೆಳ್ಳುಳ್ಳಿ, ಹೆಚ್ಚಿದ ಶುಂಠಿ, ಉಪ್ಪು ಮತ್ತು ಪುಡಿಮಾಡಿದ ಕರಿಮೆಣಸು, ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟಾಗಿ ಕಲಸಿ.
* ಅದಕ್ಕೆ ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ, ಚೆಂಡಿನಂತೆ ರೋಲ್ ಮಾಡಿ.
* ಮೊಟ್ಟೆಯ ಮಿಶ್ರಣವನ್ನು ಎಣ್ಣೆಯಲ್ಲಿ ಗರಿಗರಿಯಾಗಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಮಸಾಲೆ ತಯಾರಿಸಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕರಿಬೇವಿನ ಎಲೆಗಳು, ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಗರಂ ಮಸಾಲೆ ಹಸಿರು ಮೆಣಸು ಸೇರಿಸಿ, 2 ನಿಮಿಷಗಳ ಕಾಲ ಫ್ರೈ ಮಾಡಿ.
* ಈಗ ಹುರಿದ ಮೊಟ್ಟೆಗಳನ್ನು ತಯಾರಿಸಿದ ಮಸಾಲೆಯಲ್ಲಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
* ಸ್ವಾದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ, ಕೆಚಪ್ ಜೊತೆ ಬಿಸಿಬಿಸಿಯಾಗಿ ಬಡಿಸಿ.