ನವದೆಹಲಿ: ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಗುರುತಿಸಲು ವಿಶ್ವಸಂಸ್ಥೆಯಲ್ಲಿ (United Nations) ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಮತ್ತು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಆದರೆ ಇದಕ್ಕಾಗಿ ಕೊಂಚ ಸಮಯ ಬೇಕಾಗುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ (Delhi) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಸ್. ಜೈಶಂಕರ್ ಅವರು, ಮುಂದಿನ ವರ್ಷ ಫೆಬ್ರವರಿ 15-17 ರವರೆಗೆ ಫಿಜಿಯ ನಾಡಿನಲ್ಲಿ 12ನೇ ವಿಶ್ವ ಹಿಂದಿ ಸಮ್ಮೇಳನವನ್ನು (World Hindi Conference) ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ – ಮೂವರು ಭಾರತೀಯರು ಸೇರಿದಂತೆ 20 ಮಂದಿ ಸಾವು
Advertisement
Advertisement
ಯುನೈಟೆಡ್ ನೆಷನ್‍ನ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನು ಸೇರಿಸುವ ಪ್ರಯತ್ನಗಳು ನಡೆಯುತ್ತಿದೆ. ಹಿಂದಿಯನ್ನು ಯುನೆಸ್ಕೋದಲ್ಲಿ ಈಗಾಗಲೇ ಬಳಸಲಾಗುತ್ತಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಯುನೆಸ್ಕೋ ಪ್ರಧಾನ ಕಛೇರಿಯಲ್ಲಿ ಹಿಂದಿ ಭಾಷೆ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ (ಎಂಒಯು) ಒಪ್ಪಂದ ಮಾಡಿಕೊಂಡಿದ್ದೇವೆ. ಸೋಶಿಯಲ್ ಮೀಡಿಯಾದ ಮತ್ತು ಸುದ್ದಿಪತ್ರಗಳಲ್ಲಿ ಹಿಂದಿಯನ್ನು ಈಗಾಗಲೇ ಬಳಸಲಾಗುತ್ತಿದೆ. ಇದನ್ನು ವಿಸ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಯುನೈಟೆಡ್ ನೆಷನ್‍ನ ಪ್ರಕ್ರಿಯೆಯಲ್ಲಿ ಭಾಷೆಯನ್ನು ಪರಿಚಯಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
Advertisement
Advertisement
ಇಂಗ್ಲಿಷ್, ರಷ್ಯನ್, ಸ್ಪ್ಯಾನಿಷ್, ಚೈನೀಸ್, ಅರೇಬಿಕ್ ಮತ್ತು ಫ್ರೆಂಚ್ ಎಂಬ ಆರು ಅಧಿಕೃತ ಭಾಷೆಗಳನ್ನು ಯುಎನ್ ಹೊಂದಿದೆ. ಇದನ್ನೂ ಓದಿ: ‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್