ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದ್ದು, ಇನ್ನಷ್ಟು ಉಷ್ಣಾಂಶ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗಲಿದೆ. ಮುಂದಿನ 2 ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ತಾಪಮಾನ ಏರಿಕೆಯಾಗಲಿದೆ. ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
Advertisement
ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರಲಿದೆ. ಚಾಮರಾಜನಗರದಲ್ಲಿ 13.2 ರಷ್ಟು ಡಿಗ್ರಿ ಸೆಲ್ಸಿಯಸ್ ಇದ್ದು ಅತ್ಯಂತ ಕನಿಷ್ಠ ಉಷ್ಣಾಂಶ ಇರುವ ನಗರವಾಗಲಿದೆ. ಕಾರವಾರದಲ್ಲಿ ಗರಿಷ್ಠ 37 ಇರಲಿದ್ದು, 21 ಕಿನಿಷ್ಠ ಉಷ್ಣಾಂಶ ಇರಲಿದ್ದು ಬೇರೆ ಜಾಗಗಳಿಗೆ ಹೋಲಿಸಿದರೆ ಅತೀ ಹೆಚ್ಚು ಉಷ್ಣಾಂಶ ಇರಲಿದೆ. ಹಾಗೇಯೇ ರಾಯಚೂರು ಮತ್ತು ಶಿವಮೊಗ್ಗದಲ್ಲಿ 35 ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಎಷ್ಟು ತಾಪಮಾನ ಇರಲಿದೆ?
ಬೆಂಗಳೂರು: 33-17
ಎಚ್ಎಎಲ್: 33-16
ಬೆಂಗಳೂರು ನಗರ: 34-18
ಕೆಐಎಎಲ್: 34-17
ಜಿಕೆವಿಕೆ : 31-19
ಉಳಿದ ನಗರಗಳು
ಮಂಗಳೂರು: 33-23
ಬೆಳಗಾವಿ: 33-21
ಬೀದರ್: 34-20
ವಿಜಯಪುರ: 35-18
ಬಾಗಲಕೋಟೆ: 35-19
ಹೊನ್ನಾವರ: 33-19
ಕಾರವಾರ: 37-21
ಧಾರವಾಡ: 35-18
ಹಾವೇರಿ: 34-17
ರಾಯಚೂರು: 36-20
ಚಿಕ್ಕಮಗಳೂರು: 30-13
ಚಿತ್ರದುರ್ಗದಲ್ಲಿ: 35-18
ದಾವಣಗೆರೆ: 35-15
ಚಿಂತಾಮಣಿ: 34-13
ಮೈಸೂರು: 33.
ಶಿವಮೊಗ್ಗ: 36-16