ಬೆಂಗಳೂರು: ಮೆಟ್ರೋ ದರ ಏರಿಕೆ (Metro Ticket Price Hike) ಎಫೆಕ್ಟ್ ಒಂದೆಡೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಸಿದ್ದರೇ ಮತ್ತೊಂದೆಡೆ ಬೆಂಗಳೂರು ಟ್ರಾಫಿಕ್ (Bengaluru Traffic) ಹೆಚ್ಚಳ ಮಾಡಿದೆ. ಇದರಿಂದಾಗಿ ಬೆಂಗಳೂರಲ್ಲಿ ವಾಯುಮಾಲಿನ್ಯ (Air Pollution) ಹೆಚ್ಚಾಗುತ್ತಿದೆ.
ಜನವರಿಯಲ್ಲಿ ಬಸ್ ದರ ಏರಿಕೆಯ ನಂತರ ಫೆಬ್ರವರಿ 9ರಿಂದ ಮೆಟ್ರೋ ದರ ಏರಿಕೆ ಮಾಡಲಾಯಿತು. ದರ ಏರಿಕೆ ಹಿನ್ನೆಲೆ ಪ್ರತಿನಿತ್ಯ ಸುಮಾರು 80-90 ಸಾವಿರ ಮೆಟ್ರೋ ಪ್ರಯಾಣಿಕರು ಮೆಟ್ರೋದಿಂದ ದೂರವಾಗಿ ದ್ವಿಚಕ್ರ ವಾಹನ, ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ನಗರದಲ್ಲಿ ಒಂದೆಡೆ ಟ್ರಾಫಿಕ್ ಹೆಚ್ಚಳದ ಜೊತೆಗೆ ವಾಯುಮಾಲಿನ್ಯ ಸಹ ಹೆಚ್ಚಾಗುತ್ತಿದೆ. ಇದನ್ನೂ ಓದಿ: 137 ಅಕ್ರಮ ವಲಸಿಗರು ಪತ್ತೆ, ಕಠಿಣ ಕ್ರಮ ಕೈಗೊಳ್ಳಲಾಗಿದೆ: ಪರಮೇಶ್ವರ್
ಐಐಎಸ್‌ಸಿ ತಜ್ಞ ಆಶಿಶ್ ವರ್ಮಾ ಅಧ್ಯಯನದಂತೆ 5%ನಷ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, 5%ನಷ್ಟು ಪ್ರಯಾಣಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಇದು ಜನರ ಜೀವನ ಹಾಗೂ ವಾಯುಮಾಲಿನ್ಯದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಇದನ್ನೂ ಓದಿ: ಅಣ್ಣನಿಂದಲೇ 7 ತಿಂಗಳ ಗರ್ಭಿಣಿಯಾದ ತಂಗಿ
ಜಯನಗರದ ಕರ್ನಾಟಕ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಏರ್ ಕ್ವಾಲಿಟಿ ಮಾನಿಟರಿಂಗ್ ಅಧ್ಯಯನದ ಪ್ರಕಾರ, ಮೆಟ್ರೋ ಟಿಕೆಟ್ ಶುಲ್ಕ ಹೆಚ್ಚಳಕ್ಕೆ ಮುಂಚೆ, ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಇರುವ ಸಮಯದಲ್ಲಿ ವಾಯುಮಾಲಿನ್ಯದಲ್ಲಿ ಏರಿಕೆ ಆಗಿದೆ. ಸರಾಸರಿ ಪಿಎಂ 2.5 ಪ್ರತಿ ಘನ ಮೀಟರ್‌ಗೆ 43 ರಿಂದ 54 ಮೈಕ್ರೊಗ್ರಾಮ್ ಇತ್ತು. ಅದೇ ಫೆಬ್ರವರಿ 10 ರಂದು 112-114 ಮೈಕ್ರೊಗ್ರಾಂಗೆ ಏರಿಕೆಯಾಗಿದೆ. ಇನ್ನು ಫೆಬ್ರವರಿ 17 ಮತ್ತು 24ರ ಸೋಮವಾರ ಈ ಮಟ್ಟ ಸರಾಸರಿ 68 ರಿಂದ 105 ಮೈಕ್ರೋಗ್ರಾಂಗೆ ತಲುಪಿದೆ. ಹೀಗೆ ವಾಯುಮಾಲಿನ್ಯ ಏರಿಕೆಯಾದರೆ ಅಸ್ತಮಾದಿಂದ ಕ್ಯಾನ್ಸರ್ ತನಕ ರೋಗಗಳು ಬರಬಹುದಾಗಿದೆ. ಈ ಪ್ರಮಾಣದಲ್ಲಿ ವಾಯುಮಾಲಿನ್ಯ ಮಟ್ಟ ಏರಿಕೆಯಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ಇದನ್ನೂ ಓದಿ: 1 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ – ಹಂತಕನಿಗೆ 7 ವರ್ಷ ಶಿಕ್ಷೆ