ಬೆಂಗಳೂರು: ಸೂರ್ಯ ಗ್ರಹಣದ ಭಯ ಕಳೆಯುವ ಬೆನ್ನಲ್ಲೇ ಇದೀಗ ಮತ್ತೊಂದು ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ವರ್ಷದ ಮೊದಲ ಗ್ರಹಣ ಇದಾಗಿದ್ದು ಸೌರಮಂಡಲದಲ್ಲಿ ಚಮತ್ಕಾರ ಮಾಡಲು ರೆಡಿಯಾಗಿದೆ. ವರ್ಷ ಆರಂಭದ ಚಂದ್ರಗ್ರಹಣ ಮಹಾ ಸಂಕಷ್ಟವನ್ನೇ ತಂದೊಡ್ಡುತ್ತದೆ ಎಂದು ಜ್ಯೋತಿಷ್ಯ ವಲಯ ಹೇಳುತ್ತಿದೆ.
2019ರ ವರ್ಷಾಂತ್ಯದಲ್ಲಿ ಸೂರ್ಯಗ್ರಹದ ನೋಡಿದ್ದೆವು. ಈಗ ಚಂದ್ರಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 10 ರಂದು ಚಂದ್ರಗ್ರಹಣ ನಡೆಯುತ್ತಿದೆ. ಮತ್ತೊಂದು ಕೌತುಕಕ್ಕೆ ನಭೋಮಂಡಲ ಸಾಕ್ಷಿಯಾಗಲಿದ್ದು, ಈ ವರ್ಷದ ಮೊದಲ ಚಂದ್ರಗ್ರಹಣ ಇದಾಗಿದೆ. ಜನವರಿ 10 ಮಧ್ಯರಾತ್ರಿ 10.30ರಿಂದ 2.30 ರವರೆಗೂ 4 ಗಂಟೆಗಳ ಕಾಲ ಚಂದ್ರಗ್ರಹಣ ಇರಲಿದ್ದು. ದೊಡ್ಡ ಅಪಾಯವನ್ನೇ ಸೃಷ್ಟಿ ಮಾಡಲಿದೆ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಸೋಮ್ ಸುಂದರ್ ದೀಕ್ಷಿತ್ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸೂರ್ಯಗ್ರಹಣ ಬೆನ್ನಲ್ಲೇ ಚಂದ್ರಗ್ರಹಣ – ನಾಳೆ ಗೋಚರವಾಗಲಿದೆ ತೋಳ ಚಂದ್ರಗ್ರಹಣ
Advertisement
Advertisement
ಜಲ ಪ್ರವಾಹದ ಮುನ್ಸೂಚನೆ:
ಈ ವರ್ಷದಲ್ಲಿ ಒಟ್ಟು ನಾಲ್ಕು ಚಂದ್ರ ಗ್ರಹಣಗಳು ಸಂಭವಿಸಲಿವೆ. ಈ ವರ್ಷದ ಮೊದಲ ಚಂದ್ರಗ್ರಹಣ ಅರೆನೆರಳೆ ಚಂದ್ರ ಗ್ರಹಣವಾಗಿದ್ದು, ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ಈ ಚಂದ್ರಗ್ರಹಣ ಜಲ ಪ್ರವಾಹದ ಮುನ್ಸೂಚನೆ ಅಂತ ಸೋಮ್ ಶೇಖರ್ ದೀಕ್ಷೀತ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
Advertisement
ಸೂರ್ಯ ಅಂದರೆ ಅಗ್ನಿ, ಚಂದ್ರ ಅಂದರೆ ಜಲ. ಹೀಗಾಗಿ ಕಳೆದ ತಿಂಗಳು ಸೂರ್ಯ ಗ್ರಹಣ ಸಂಭವಿಸಿ ಒಂದು ದೇಶದಲ್ಲಿ ಕಾಡ್ಗಿಚ್ಚು ಹೊತ್ತು ಉರಿದು ಜೀವ ರಾಶಿಗಳು ಬಲಿಯಾಗಿವೆ. ಇದೇ ರೀತಿ ಕಳೆದ ವರ್ಷ ಸಂಭವಿಸಿದ ಚಂದ್ರಗ್ರಹಣದಿಂದಾಗಿ ಕೇರಳ, ಕರ್ನಾಟಕದ ಕೊಡಗು ಮತ್ತು ಉತ್ತರ ಕರ್ನಾಟಕ ಜಲಪ್ರವಾಹ ಆಯ್ತು. ಬದುಕು ಬೀದಿಗೆ ಬಂತು. ಇದು ಚಂದ್ರ ಗ್ರಹಣದಿಂದ ಆಗಿರುವ ಪ್ರಾಕೃತಿಕ ವಿಕೋಪಗಳು. ಈ ಬಾರಿಯ ವರ್ಷ ಆರಂಭ ಚಂದ್ರಗ್ರಹಣದಿಂದ ಜಲ ಪ್ರವಾಹ ಆಗುತ್ತದೆ. ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಆಗಬಹುದು. ರಾಜ್ಯದಲ್ಲಿ ಆದ ಜಲಪ್ರಳಯ ಮತ್ತೆ ಮರುಕಳಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 22 ನಕ್ಷತ್ರ, 12 ರಾಶಿಯವ್ರಿಗೂ ಇದೆ ಚಂದ್ರಗ್ರಹಣದ ಗಂಡಾಂತರ!
Advertisement
ಈ ಚಂದ್ರಗ್ರಹಣ ಏಷ್ಯಾ, ಆಫ್ರಿಕಾ, ಯೂರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಗೋಚರವಾಗತ್ತಿದೆ. ಭಾರತದಲ್ಲಿ ಗೋಚರವಾಗಲ್ಲ ಎಂದು ಹೇಳಲಾಗ್ತಿದೆ. ಭಾರತದಲ್ಲಿ ಗೋಚರವಾಗದಿದ್ದರೂ ಇದರ ಎಫೆಕ್ಟ್ ಇದ್ದೇ ಇದೆ. ಚಂದ್ರ ಎಲ್ಲರಿಗೂ ಒಂದೇ. ಚಂದ್ರನೇ ಚಂದ್ರಗ್ರಹಣ ವೇಳೆ ದೇವರ ದರ್ಶನ ಮಾಡಬೇಕು. ಈಶ್ವರ ಪ್ರಾರ್ಥಿಸಬೇಕು ಒಳ್ಳೆದಾಗುತ್ತೆ ಎಂದು ಹೇಳುತ್ತಾರೆ. ಗೋಚರವಾಗಲ್ಲ ಅಂತ ಸುಮ್ನೆ ಇದ್ದರೆ ಜನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೋಮ್ ಶೇಖರ್ ದೀಕ್ಷಿತ್ ಗುರೂಜಿಗಳು ಹೇಳುತ್ತಾರೆ.
ಒಟ್ಟಾರೆ ವರ್ಷದ ಆರಂಭದ ಚಂದ್ರ ಗ್ರಹಣ ಭಾರತದಲ್ಲಿ ಗೋಚರವಾಗದಿದ್ದರೂ ಮಹಾ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ದೇವರ ದರ್ಶನ ಮಾಡುವುದರಿಂದ ಚಂದ್ರಗ್ರಹಣದಿಂದ ಆಗಬಹುದಾದ ತೊಂದರೆಗಳಿಂದ ಪಾರಾಗಬಹುದು ಅಂತ ಹೇಳಲಾಗ್ತಿದೆ.